ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಅನಾರೋಗ್ಯದ ಕಾರಣ ನಿನ್ನೆ ತಡರಾತ್ರಿ ದಿಲ್ಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಎದುರಾಗಿದ್ದರಿಂದ ಇವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಗ್ಯಾಸ್ಟ್ರೋ ವಿಭಾಗಕ್ಕೆ ದಾಖಲಿಸಲಾಗಿದ್ದು ಈಗ ಆರೋಗ್ಯ ಸ್ಥಿರವಾಗಿದೆ.
ಕಳೆದ ವಾರ ಕೂಡಾ ಸೋನಿಯಾ ಗಾಂಧಿ ರಕ್ತದೊತ್ತಡ ಸಮಸ್ಯೆಯಿಂದ ಶಿಮ್ಲಾ ಆಸ್ಪತ್ರೆಯಲ್ಲಿ ದಾಖಲಾಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು.

