ಕುಂದಾಪುರದ ಪ್ರಖ್ಯಾತ ಅಸೋಡು ಬೆಂಕಿಕಾನ್ ಶ್ರೀ ನಂದಿಕೇಶ್ವರ ದೇಗುಲದಲ್ಲಿ ದೇವರ ನೂತನ ವಿಗ್ರಹ ಪ್ರತಿಷ್ಠೆ ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಕಾರ್ಯಕ್ರಮಗಳು ಇದೇ ಜೂನ್ 25 ಮತ್ತು 26ರಂದು ಹಾಗೂ ಜುಲೈ 6ರಿಂದ 8ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ಜೂನ್ 25ರ ಬುಧವಾರದಂದಿಂದ ಮೊದಲ್ಗೊಂಡು ಸನ್ನಿಧಾನದಲ್ಲಿ ದೈವಗಳ ಕಲಾಸಂಕೋಚ, ಜೀವಕುಂಭ ಸ್ಥಾಪನೆ, ಬಾಲಾಲಯ ಶುದ್ಧಿ, ಸಹಸ್ರ ಕಲಶ ಸ್ಥಾಪನೆ, ಅಘೋರ ಬಲಿ, ರಕ್ಷಾ ಸುದರ್ಶನ ಹೋಮ, ಬ್ರಹ್ಮರಾಕ್ಷಸ ಆಕರ್ಷಣೆ ಮತ್ತು ಪ್ರಧಾನ ಹೋಮ, ಬ್ರಹ್ಮಕಲಶಾಭಿಷೇಕ, ಶ್ರೀ ದೈವಗಳ ಪುನರ್ ಪ್ರತಿಷ್ಠೆ ಇತರ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ.

ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಕೊನೆಯ ದಿನ (ಜು.8)ಕ್ಕೆ ಮಧ್ಯಾಹ್ನ ಅನ್ನದಾನದ ವ್ಯವಸ್ಥೆ ಕೂಡಾ ಇರಲಿದೆ. ದೈವಗಳಿಗೆ ಕಲಶಾಭಿಷೇಕ ನಡೆಯುವುದರಿಂದ ಭಕ್ತಾಭಿಮಾನಿಗಳು ಒಂದು ಕಲಶಕ್ಕೆ 501 ರೂ ನೀಡಿ ಕಲಶ ಪ್ರಸಾದ ಪಡೆಯಬಹುದು.

ಭಕ್ತಾಭಿಮಾನಿಗಳು ಆಗಮಿಸಿ ದೇವರ ಪುಣ್ಯ ಕಾರ್ಯಗಳಲ್ಲಿ ಭಾಗವಹಿಸಿ ಕೃತಾರ್ಥರಾಗುವಂತೆ ಅಸೋಡು ಮನೆಯವರು, ಅರ್ಚಕರು, ಗ್ರಾಮಸ್ಥರು ವಿನಂತಿಸಿಕೊಂಡಿದ್ದಾರೆ.



