ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಕಾನ್ಸ್ಟೇಬಲ್ ವರ್ಗಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಪಶ್ಚಿಮ ವಲಯದಲ್ಲಿ ಒಟ್ಟು 12 ಪಿಯೆಸ್ಸೈ ವರ್ಗಾವಣೆಗೊಳಿಸಿ ಪಶ್ಚಿಮ ವಲಯ ಐಜಿಪಿ ಶ್ರೀ ಅಮಿತ್ ಸಿಂಗ್ ಆದೇಶಿಸಿದ್ದಾರೆ.
ಗಂಗೊಳ್ಳಿ ಠಾಣೆಯ ಪಿಎಸ್ಸೈ ಹರೀಶ್ ಅವರನ್ನು ಉಡುಪಿಯ ಸೆನ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು ಸೆನ್ ಠಾಣೆ ಎಸ್ಸೈ ಪವನ್ ನಾಯಕ್ ಅವರನ್ನು ಗಂಗೊಳ್ಳಿ ಠಾಣೆಗೆ ವರ್ಗಾಯಿಸಲಾಗಿದೆ.

ಗಂಗೊಳ್ಳಿ ಠಾಣೆ ನೂತನ ಪಿಎಸ್ಸೈ ಪವನ್ ನಾಯಕ್ ಅತ್ಯಂತ ಪ್ರಾಮಾಣಿಕ ಅಧಿಕಾರಿ ಎಂದು ಇಲಾಖೆಯಲ್ಲಿ ಹೆಸರುಗಳಿಸಿದವರು. ಈ ಹಿಂದೆ ಬೈಂದೂರು ಠಾಣೆಯಲ್ಲಿಯೂ ಪಿಎಸ್ಸೈ ಆಗಿ ಸೇವೆ ಸಲ್ಲಿಸಿರುತ್ತಾರೆ.
ಉಡುಪಿ ಜಿಲ್ಲೆಯ ಮಲ್ಪೆ ಠಾಣೆಗೆ ಅನಿಲ್ ಕುಮಾರ್ ಡಿ, ಅಜೆಕಾರು ಠಾಣೆಗೆ ಮಹೇಶ್ ಟಿ ಎಂ , ಹೆಬ್ರಿ ಠಾಣೆಗೆ ರವಿ ಬಸಪ್ಪ ಕಾರಗಿ, ಕಾರ್ಕಳಕ್ಕೆ ಮುರಳೀಧರ್ ಅವರನ್ನು ವರ್ಗಾಯಿಸಿ ಆದೇಶಿಸಲಾಗಿದೆ.

