ಇಸ್ರೇಲ್ ಇರಾನ್ ಮಧ್ಯೆ ತೀವ್ರವಾಗಿ ಯುದ್ಧ ನಡೆಯುತ್ತಿದ್ದು ಹಿಂಸಾಚಾರ ಜೋರಾಗಿದೆ. ಇರಾನ್ ದೇಶಕ್ಕೆ ಬುದ್ಧಿ ಕಲಿಸುವ ಉದ್ದೇಶದಿಂದ ಇಸ್ರೇಲ್ ದಾಳಿ ನಡೆಸುತ್ತಿದೆ. ಈ ದಾಳಿಯಿಂದ ಪರೋಕ್ಷವಾಗಿ ಇತರ ದೇಶಗಳಿಗೂ ನಷ್ಟವುಂಟಾಗಿದೆ. ಇಸ್ರೇಲ್ ಮತ್ತು ಇರಾನ್ ಮಧ್ಯೆ ನಡೆಯುತ್ತಿರುವ ಕದನಕ್ಕೆ ವಿರಾಮ ನೀಡಲು ಜಾಗತಿಕ ನಾಯಕರು ಸಜ್ಜಾಗಿದ್ದಾರೆ.
ಇಸ್ರೇಲ್ ದೇಶವು ಇರಾನ್ನ ಮೇಲೆ ಯುದ್ಧವನ್ನು ಪ್ರಾರಂಭಿಸಿದ ಅತ್ಯಲ್ಪ ಅವಧಿಯಲ್ಲಿ ಇರಾನ್ನ ಟೆಹ್ರಾನ್ ಸೇರಿದಂತೆ ಪಶ್ಚಿಮ ಭಾಗದ ಮೇಲೆ ವಾಯು ಪ್ರಾಬಲ್ಯವನ್ನು ಗಳಿಸಿರುವುದಾಗಿ ಹೇಳಿದೆ. ಇರಾನ್ನ ವಿವಿಧ ಪ್ರದೇಶಗಳಲ್ಲಿ ಪ್ರಾಬಲ್ಯ ಸಾಧಿಸಿರುವುದಾಗಿಯೂ ಹೇಳಿದೆ. ಇಸ್ರೇಲ್ ಮಿಲಿಟರಿ ಪಡೆಗಳು ದುಬಾರಿ ಹಾಗೂ ಹಲವು ಕಿ.ಮೀ ಕ್ರಮಿಸಬಲ್ಲ ಕ್ಷಿಪಣಿಗಳನ್ನು ಅವಲಂಬಿಸುವ ಬದಲು ಯುದ್ಧ ವಿಮಾನಗಳನ್ನು ಬಳಸಿದೆ. ಇರಾನ್ನ ಮೇಲೆ ಬಾಂಬ್ಗಳ ಸುರಿಮಳೆಯನ್ನೇ ಸುರಿಸಲಾಗಿದೆ. ಮೊನ್ನೆ ತಾನೇ ಸುದ್ದಿ ವಾಹಿನಿ ಕಚೇರಿಯ ಮೇಲೆ ಕೂಡಾ ದಾಳಿಯನ್ನು ನಡೆಸಲಾಯಿತು.
ಈ ಯುದ್ಧದಿಂದ ಪಾಕಿಸ್ತಾನ, ಭಾರತ ಸೇರಿದಂತೆ ಅನೇಕ ದೇಶಗಳಿಗೆ ಅಪಾರ ನಷ್ಟವುಂಟಾಗಲಿದೆ. ಈ ಕದನ ನೇರವಾಗಿ ದುಷ್ಪರಿಣಾಮ ಬೀರಲಿದೆ. ಭಾರತದಲ್ಲಿ ಆರ್ಥಿಕ ಲೆಕ್ಕಾಚಾರಗಳು ತಲೆಕೆಳಗಾಗುತ್ತಿವೆ. ಭಾರತದಲ್ಲಿ ಪೆಟ್ರೋಲ್ – ಡೀಸೆಲ್ ಹಾಗೂ ಚಿನ್ನದ ಬೆಲೆ ಬಲು ದುಬಾರಿಯಾಗಲಿದೆ ಎಂದೇ ಹೇಳಲಾಗುತ್ತಿದೆ. ಹರಿಯಾಣ, ಪಂಜಾಬ್ನಿಂದ 30%-35%ರಷ್ಟು ಬಾಸುಮತಿ ಅಕ್ಕಿ ಇರಾನ್ಗೆ ರಫ್ತಾಗುತಿತ್ತು. ಸದ್ಯ ಇದಕ್ಕೆ ತಡೆಯಾಗುವ ಸಾಧ್ಯತೆಯಿದ್ದು, ಹಣದ ವಹಿವಾಟಿಗೆ ಇನ್ನೂ 6 ತಿಂಗಳು ಬೇಕಾಗಬಹುದು.
ಗಲ್ಫ್ ಆಫ್ ಉಮಾನ್, ರೆಡ್ ಸೀ, ಹರ್ಮೂಜ್ ಜಲಸಂಧಿಯಲ್ಲಿ ಸಬ್ಮರೀನ್ ಕೇಬಲ್ಗಳನ್ನು ಹಾಕಲಾಗಿದೆ. ಇದರಿಂದಲೇ 95% ಗ್ಲೋಬಲ್ ಇಂಟರ್ನೆಟ್ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಇವುಗಳಿಂದ ಸೌತ್ಈಸ್ಟ್ ದೇಶಗಳಿಗೆ ಡಿಫೆನ್ಸ್, ಬ್ಯಾಂಕಿಂಗ್ನಲ್ಲಿ ಸಮಸ್ಯೆಯುಂಟಾಗುತ್ತದೆ. ಒಂದು ವೇಳೆ ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ಈ ಕೇಬಲ್ಗಳಿಗೆ ಸಮಸ್ಯೆ ಆದರೆ ದೊಡ್ಡಮಟ್ಟದ ಹಾನಿಯಾಗುವ ಆತಂಕ ಉಂಟಾಗಿದೆ. ಅಷ್ಟೇ ಅಲ್ಲದೆ ಬಹು ಮುಖ್ಯವಾಗಿ ಇರಾನ್ ಪೋರ್ಟ್ನಲ್ಲಿ ಭಾರತ 80 ಬಿಲಿಯನ್ ಹೂಡಿಕೆ ಮಾಡಿದ್ದು ಆತಂಕ ಹೆಚ್ಚಾಗಿದೆ.

