ಕಾರ್ಕಳ: ಗೋಶಾಲೆಗೆ ನುಗ್ಗಿ ಅಲ್ಲಿಂದಲೇ ಸುಮಾರು ಹತ್ತು ಸಾವಿರ ರೂ. ಬೆಲೆ ಬಾಳುವ ಮೂರು ದನಗಳನ್ನು ಕಳವುಗೈದ ಘಟನೆ ಕಾರ್ಕಳದ ಬಜಗೋಳಿಯ ಮುಡಾರು ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಅಹಿಂಸಾ ಆ್ಯನಿಮಲ್ ಕೇರ್ ಟ್ರಸ್ಟ್ ನಡೆಸುತ್ತಿರುವ ಗೋಶಾಲೆಯಿಂದ ಗೋಹಂತಕರು ಬೆಳ್ಳಂಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ದನಗಳನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಗೋಶಾಲೆಯಲ್ಲಿ ಗಾಯಗೊಂಡ, ಖಾಯಿಲೆಗೊಳಗಾದ, ಬೀದಿ ಪಾಲಾದ ದನ, ಬೆಕ್ಕು, ನಾಯಿಗಳನ್ನು ತಂದು ಆರೈಕೆ ಮಾಡಲಾಗುತ್ತದೆ. ಕಳವಾದ ದನಗಳ ಮೌಲ್ಯ ಹತ್ತು ಸಾವಿರ ರೂ. ಆಗಿರಬಹುದೆಂದು ಟ್ರಸ್ಟ್ ಸಂಚಾಲಕ ಎಂ.ಕೆ ವಿರಂಜಯ್ ಅವರು ದೂರಿನಲ್ಲಿ ತಿಳಿಸಿದ್ದಾರೆ.


