ಬೆಂಗಳೂರು: ಬಿಗ್ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷಾಂತರ ರೂ. ವಂಚನೆ ಆರೋಪ ಕೇಳಿಬಂದಿದ್ದು ರಾಯಚೂರಿನ ಮೈನುದ್ದೀನ್ ಎಂಬವರು ಗಂಭೀರ ಆರೋಪದ ಮಳೆಗರೆದಿದ್ದಾರೆ.
ಸುರೇಶ್ ಅವರು ಕೇಬಲ್ ಚಾನೆಲ್ ನ ಸೆಟ್ ಅಪ್ ಮಾಡಿ ಕೊಡುವುದಾಗಿ ಹೇಳಿದ್ದರು. ಹದಿನಾಲ್ಕು ಲಕ್ಷಕ್ಕೆ ಒಪ್ಪಂದ ಆಗಿದ್ದು ನಾಲ್ಕು ಲಕ್ಷ ಮೊದಲೇ ಅಡ್ವಾನ್ಸ್ ಪಡೆದಿದ್ದರು.
ಆದರೆ ಅರ್ಧಂಬರ್ಧ ಕೆಲಸ ಮಾಡಿ ಅರ್ಧಕ್ಕೆ ಬಿಟ್ಟಿದ್ದಾರೆ. ಹಣವನ್ನು ಕೂಡಾ ಮರಳಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

