ಮನುಷ್ಯನಿಗೆ ಜೀವನದಲ್ಲಿ ನೆಮ್ಮದಿ ಇರಬೇಕಾದರೆ ಯಶಸ್ಸು, ಸಂತೋಷ ಮತ್ತು ಹಣ ಎಂಬುವುದು ಅತ್ಯಂತ ಮುಖ್ಯವಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬ ಮನುಷ್ಯ ಒತ್ತಡದ ಕೆಲಸ, ಶ್ರಮ ಎಲ್ಲ ರೀತಿಯ ತಂತ್ರಗಳನ್ನು ಬಳಸಿಕೊಂಡು ಜೀವನದಲ್ಲಿ ಒದ್ದಾಡುತ್ತಾರೆ. ಆದರೆ ಈ ಎಲ್ಲ ಪ್ರಯತ್ನಕ್ಕೂ ಮುನ್ನ ಕೆಲವೊಂದು ಅಗತ್ಯ ಕ್ರಮಗಳನ್ನು ಅನುಸರಿಸಬೇಕು.
ಈ ತಂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಖಂಡಿತ ಯಶಸ್ಸು, ಸಂತೋಷ ಮತ್ತು ಹಣವನ್ನು ಪಡೆಯಬಹುದು. ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುವ, ಸಂತೋಷ ಹೆಚ್ಚಾಗುವ, ಹಣ ಗಳಿಕೆಗೆ ಸಹಾಯವಾಗುವ, ಯಶಸ್ಸು ನಿಮ್ಮ ಕಡೆಗೆ ಓಡಿ ಬರುವಂತೆ ಮಾಡುವ ಈ ಮಾರ್ಗಗಳನ್ನು ಅನುಸರಿಸಬೇಕು. ಪ್ರಸಿದ್ಧ ಜೀವನ ವಾಸ್ತುಶಿಲ್ಪಿ ಮತ್ತು ಮನೋವಿಜ್ಞಾನಿ ಶಿಖರ್ ಚೌಧರಿ ತಮ್ಮ ಇನ್ಸ್ಟಾದಲ್ಲಿ ಈ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬ್ರಹ್ಮಾಂಡದ ಅತ್ಯಂತ ಶಕ್ತಿಶಾಲಿ ಮತ್ತು ರಹಸ್ಯ ನಿಯಮವನ್ನು ಮನುಷ್ಯರು ಪಾಲಿಸಬೇಕು. ಇದು ಇಡೀ ಜೀವನವನ್ನು ಕೇವಲ 21 ದಿನಗಳಲ್ಲಿ ಯಶಸ್ಸಿನ ಕಡೆಗೆ ಕರೆದುಕೊಂಡು ಹೋಗುತ್ತದೆ ಎಂದು ಹೇಳಿದ್ದಾರೆ. ಹಾಗಾದರೆ ಈ ನಿಯಮ ಯಾವುದು? ಇಲ್ಲಿದೆ ನೋಡಿ ಮಾಹಿತಿ.
ಶಿಖರ್ ಚೌಧರಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಕಾರ, ಇದು ಬ್ರಹ್ಮಾಂಡದ ಅತ್ಯಂತ ರಹಸ್ಯ ಮತ್ತು ಅತ್ಯಂತ ಶಕ್ತಿಶಾಲಿ ನಿಯಮ. ಸಂಪೂರ್ಣ ನಿಮ್ಮ ವಾಸ್ತವ ಸ್ಥಿತಿಯನ್ನು ಇದು ಬದಲಾಯಿಸಬಹುದು. ಕೇವಲ 21 ದಿನಗಳವರೆಗೆ, ಪ್ರತಿ ರಾತ್ರಿ ಮಲಗುವ ಮೊದಲು, ನಿಮ್ಮ ಹಣೆಯ ಮಧ್ಯಭಾಗವನ್ನು ನಿಮ್ಮ ಎರಡು ಬೆರಳುಗಳಿಂದ ಲಘುವಾಗಿ ಟ್ಯಾಪ್ ಮಾಡಬೇಕು. ಶಾಸ್ತ್ರದ ಪ್ರಕಾರ ಇದನ್ನು ಮೂರನೇ ಕಣ್ಣು ಎಂದು ಕರೆಯುತ್ತಾರೆ. ಈ ಸ್ಥಳದಲ್ಲಿ ಟ್ಯಾಪ್ ಮಾಡುವಾಗ ಈ ಕೆಳಗೆ ನೀಡಿದ ವಿಚಾರಗಳನ್ನು ಪಠಿಸಬೇಕು.
‘ನಾನು ಯಶಸ್ವಿಯಾಗಿದ್ದೇನೆ’
‘ನಾನು ಸಂತೋಷವಾಗಿದ್ದೇನೆ’
‘ನನ್ನ ಬಳಿ ಹಣವಿದೆ’
‘ನಾನು ಆರೋಗ್ಯವಾಗಿದ್ದೇನೆ’
‘ನನ್ನ ಸಂಬಂಧಗಳು ಸಂತೋಷವಾಗಿವೆ’
ಹಾಗಾದರೆ ಇದು ಹೇಗೆ ಕೆಲಸ ಮಾಡುತ್ತದೆ?
ಈ ತಂತ್ರದ ಹಿಂದೆ ಮನೋವಿಜ್ಞಾನ ಪ್ರಭಾವ ಇರುತ್ತದೆ. ಇದು ಅಭಿವ್ಯಕ್ತಿ ವಿಚಾರಗಳನ್ನು ಬೆಳೆಸಿಕೊಳ್ಳಲು ಸಹಾಯವನ್ನು ಮಾಡುತ್ತದೆ. ಪ್ರತಿದಿನ ಈ ಸಕಾರಾತ್ಮಕ ವಿಷಯಗಳನ್ನು ಹೇಳಿಕೊಂಡಾಗ, ವಿಶೇಷವಾಗಿ ಮಲಗುವ ಮೊದಲು, ನಿಮ್ಮ ಮನಸ್ಸು ಈ ವಿಷಯಗಳನ್ನು ಸತ್ಯವೆಂದು ನಂಬಲು ಪ್ರಾರಂಭಿಸುತ್ತದೆ. ಏನು ಯೋಚಿಸುತ್ತೀರೋ ಅದು ನಿಮ್ಮ ಜೀವನದಲ್ಲಿಯೂ ಸಂಭವಿಸಲು ಪ್ರಾರಂಭಿಸುತ್ತದೆ. ನೀವು ‘ನಾನು ಯಶಸ್ವಿಯಾಗಿದ್ದೇನೆ’ ಎಂದು ಹೇಳುತ್ತಿದ್ದಂತೆ, ವಿಶ್ವವು (ಯುನಿವರ್ಸ್)ನಿಮ್ಮ ಜೀವನದಲ್ಲಿ ಅಂತಹ ಅವಕಾಶಗಳನ್ನು ನೀಡಲು ಮುಂದಾಗುತ್ತದೆ ಎಂದು ಶಿಖರ್ ಚೌಧರಿ ಹೇಳಿದ್ದಾರೆ.
ಇದನ್ನು ಮಲಗುವ ಮುನ್ನ ಏಕೆ ಮಾಡಬೇಕು?
ರಾತ್ರಿ ಮಲಗುವ ಮುನ್ನ ನಮ್ಮ ಮನಸ್ಸು ಅತ್ಯಂತ ಶಾಂತ ಮತ್ತು ಗ್ರಹಿಸುವ ಸ್ವಭಾವವನ್ನು ಹೊಂದಿರುತ್ತದೆ. ಒಂದು ದಿನದ ಕೆಲಸ, ಒತ್ತಡ ಮತ್ತು ಗಡಿಬಿಡಿಯ ನಂತರ ಮನಸ್ಸು ಸಂಪೂರ್ಣವಾಗಿ ಶಾಂತವಾಗುವುದು ಮಲಗುವ ಸಂದರ್ಭದಲ್ಲೇ. ಆ ಸಮಯದಲ್ಲಿ ಈ ವಿಚಾರಗಳನ್ನು ಹೇಳಿಕೊಂಡರೆ ಮನಸ್ಸು ಹೇಳಿದನ್ನು ಕೇಳುತ್ತದೆ. ನಮ್ಮ ಆಲೋಚನೆ, ಭಾವನೆಗಳು ಮತ್ತು ನಿರ್ಧಾರಗಳನ್ನು ಮೆದುಳು ನಿಯಂತ್ರಣ ಮಾಡುತ್ತದೆ. ಈ ಸಮಯದಲ್ಲಿ, ನೀವು ನಿಮಗೆ ಸಕಾರಾತ್ಮಕವಾಗಿ ಏನನ್ನಾದರೂ ಹೇಳಿದರೆ ತಕ್ಷಣ ಗ್ರಹಿಸುತ್ತದೆ. ಹಾಗೂ ಅದನ್ನೇ ಪಾಲನೆ ಮಾಡುತ್ತದೆ. ಹೊಸ ಆಲೋಚನೆ, ಹೊಸ ನಂಬಿಕೆ ಮತ್ತು ಬದಲಾದ ವಾಸ್ತವವನ್ನು ಪ್ರಾರಂಭಿಸುತ್ತವೆ. ಇದು ಪವಾಡವಲ್ಲ, ಆದರೆ ಮನಸ್ಸಿನ ವೈಜ್ಞಾನಿಕ ಪ್ರಕ್ರಿಯೆ, ಇದು ನಿಮ್ಮ ಜೀವನವನ್ನು ಒಳಗಿನಿಂದ ಮರು-ಪ್ರೋಗ್ರಾಂ ಮಾಡುತ್ತದೆ.
ಈ ಕ್ರಮವನ್ನು ಪಾಲಿಸುವುದು ಹೇಗೆ?
ಈ ವಿಚಾರಗಳ್ನು ಮಾಡಲು ಹಣ ಖರ್ಚು ಮಾಡಬೇಕಿಲ್ಲ. ಪ್ರತಿದಿನ ನಿಮಗಾಗಿ ಕೇವಲ 2 ನಿಮಿಷಗಳನ್ನು ಮೀಸಲಿಡಬೇಕು. 21 ದಿನಗಳ ನಂತರ ನೀವು ಯೋಚಿಸುವ ರೀತಿ, ದಿನದ ಆರಂಭ ಮತ್ತು ಜನರ ವರ್ತನೆ, ಎಲ್ಲವೂ ನಿಧಾನವಾಗಿ ಬದಲಾಗುತ್ತದೆ. ಇಂದಿನಿಂದಲೇ ರಾತ್ರಿ ಪ್ರಾರಂಭಿಸಿ. ನಿಮ್ಮ ಬೆರಳಿನಲ್ಲೇ ಅದೃಷ್ಟ ಇದೆ. ಈ ಮಂತ್ರವು ಯಾವುದೇ ಮ್ಯಾಜಿಕ್ ಅಲ್ಲ. ಇದು ವೈಜ್ಞಾನಿಕ ಮತ್ತು ಚಿಂತನಶೀಲ ತಂತ್ರವಾಗಿದೆ ಎಂದು ಶಿಖರ್ ಚೌಧರಿ ಹೇಳಿದ್ದಾರೆ.


