ಎಪ್ಪತ್ತೈದು ಕೋಟಿ ಸಂಭಾವನೆ ಪಡೆಯುತ್ತಿದ್ದ ವ್ಯಕ್ತಿಯೋರ್ವ ಏಕಾಏಕಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಲೌಕಿಕ ಬದುಕಿನ ಜಂಜಾಟವೇ ಬೇಡವೆಂದು ಸನ್ಯಾಸತ್ವ ಸ್ವೀಕರಿಸಿದ ಇವರು ಬೇರೆ ಯಾರೂ ಅಲ್ಲ. ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಬಲಗೈ ಬಂಟ ಪ್ರಕಾಶ್ ಶಾ.
ಇವರು ರಿಲಯನ್ಸ್ ಇಂಡಸ್ಟ್ರಿಯ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎಪ್ಪತ್ತೈದು ಕೋಟಿ ಸಂಬಳದ ಈ ಹುದ್ದೆಯ ಜೊತೆಗೆ ಆಡಂಬರದ ಜೀವನಕ್ಕೂ ತಿಲಾಂಜಲಿ ಇಟ್ಟಿದ್ದಾರೆ.
ಪತ್ನಿ ನೈನಾ ಶಾ ಕೂಡಾ ಇವರ ಹಾದಿಯಲ್ಲೇ ಸಾಗಿದ್ದಾರೆ. ಇವರ ಓರ್ವ ಪುತ್ರ ಕೂಡಾ ದೀಕ್ಷೆ ಪಡೆದುಕೊಂಡಿದ್ದಾರೆ.

