ಭಟ್ಕಳ: ಪ್ರವಾಸಿ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಇತಿಹಾಸ ಪ್ರಸಿದ್ಧ ಮುರುಡೇಶ್ವರ ದೇಗುಲದಲ್ಲಿ ಭಕ್ತರಿಗೆ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ.
ಮಹಿಳೆಯರು ಸೀರೆ, ಚೂಡಿದಾರ, ಪುರುಷರು ಅಂಗಿ, ದೋತಿ, ಪ್ಯಾಂಟ್ ಶರ್ಟ್ ಮತ್ತು ಕುರ್ತಾ ಪೈಜಾಮ ಧರಿಸಿ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆಯಬಹುದಾಗಿದೆ.
ಈ ಬಗ್ಗೆ ಭಕ್ತಾದಿಗಳು ಗಮನ ಹರಿಸುವಂತೆ ದೇಗುಲದ ಮುಂಭಾಗದಲ್ಲಿಯೇ ಕಟೌಟ್ ಹಾಕಿ ಜಾಗೃತಿ ಮೂಡಿಸಲಾಗಿದೆ. ಮಾಡರ್ನ್ ಡ್ರೆಸ್ ಧರಿಸಿ ಬರುವ ಯಾರಿಗೂ ಪ್ರವೇಶ ಇರುವುದಿಲ್ಲ ಎಂದು ದೇಗುಲದ ಆಡಳಿತ ಸಮಿತಿ ಸ್ಪಷ್ಟಪಡಿಸಿದೆ.

