ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ಗೊತ್ತಿದ್ದರೂ ಕೆಲವರು ಈ ಚಟಕ್ಕೆ ಎಡಿಕ್ಟ್ ಆಗಿರುತ್ತಾರೆ. ಈಗಂತೂ ಕುಡಿಯೋದೂ ಒಂದು ರೀತಿಯ ಟ್ರೆಂಡ್ ಆಗಿಬಿಟ್ಟಿದೆ. ವೀಕೆಂಡ್ ಫಿನಿಶ್ ಆಗೋದೇ ಡ್ರಿಂಕ್ಸ್ ಪಾರ್ಟಿಯಿಂದ ಅನ್ನುವಂತಾಗಿದೆ. ಅತಿಯಾದ ಮದ್ಯಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತೆ. ಲಿವರ್ ಆರೋಗ್ಯಕ್ಕೂ ಹಾನಿ ಮಾಡಿಬಿಡುತ್ತೆ. ಆದರೆ ಈ ಎಲ್ಲಾ ತೊಂದರೆ ಈ ಒಂದು ಹಣ್ಣು ಮ್ಯಾಜಿಕ್ ಮಾಡುತ್ತಂತೆ….ಏನದು…? ನೋಡೋಣ ಬನ್ನಿ…
ನಮ್ಮ ದೇಹದ ಮುಖ್ಯ ಅಂಗವಾದ ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸಲು ವೈದ್ಯರು ಈ ಹಣ್ಣನ್ನು ಸೇವಿಸುವಂತೆ ಸಲಹೆ ನೀಡುತ್ತಾರಂತೆ. ಹೌದು ಅಂಜೂರ ಹಣ್ಣು ತಿನ್ನುವುದರಿಂದ ಯಕೃತ್ತಿನಲ್ಲಿರುವ ರಾಸಾಯನಿಕ, ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಮದ್ಯಪಾನ ಮಾಡುವವರು ದಿನದಲ್ಲಿ ಆರರಿಂದ ಹತ್ತು ಅಂಜೂರ ಹಣ್ಣುಗಳನ್ನು ತಿನ್ನಬೇಕು. ಈ ಹಣ್ಣಿನಲ್ಲಿರುವ ಸಿನೋಬಯೋಟಿಕ್ಸ್ ಎಂಬ ಸಂಯುಕ್ತವು ಯಕೃತ್ತಿನ ಕೋಶಗಳು ಕ್ಯಾನ್ಸರ್ ಕೋಶಗಳಾಗಿ ಬದಲಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಆದ್ದರಿಂದ ಅತಿಯಾಗಿ ಮದ್ಯಸೇವನೆ ಮಾಡುವವರು ಅಂಜೂರ ಹಣ್ಣನ್ನು ಸೇವಿಸಿದರೆ ಲಿವರ್ ನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಂಜೂರ ಲಭ್ಯವಿಲ್ಲದಿದ್ದರೆ ಒಣ ಅಂಜೂರವನ್ನು ಸೇವಿಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

