ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲೆಲ್ಲ ಅರಿಶಿನ ನೀರಿದ್ದೇ ಹವಾ. ಯಾರದ್ದೇ ಸ್ಟೇಟಸ್ ನೋಡಿದ್ರೂ ಅದೊಂದೇ ರೀಲ್ಸ್. ಆದರೆ ಈ ರೀತಿ ಮಾಡುವುದು ನಮಗೂ, ಮನೆಗೂ ಶುಭವಲ್ಲವಂತೆ. ಹಾಗಂತ ಖ್ಯಾತ ಜ್ಯೋತಿಷಿಯೋರ್ವರು ಈ ಬಗ್ಗೆ ಅಪಾಯಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ರಾತ್ರಿ ಕತ್ತಲೆಯಲ್ಲಿ ನೀರಿಗೆ ಅರಿಶಿನ ಸುರಿದು ಮೊಬೈಲ್ ಬೆಳಕಿಟ್ಟು ವೀಡಿಯೋ ಮಾಡುವ ಟ್ರೆಂಡ್ ಹೆಚ್ಚಾಗ್ತಿದೆ. ಆದರೆ ಇದು ನಮಗೇ ನಾವೇ ಅಪಾಯವನ್ನು ಆಹ್ವಾನ ಮಾಡಿಕೊಂಡಂತೆ. ಇದರ ಬಗ್ಗೆ ಖ್ಯಾತ ಜ್ಯೋತಿಷಿ ಅರುಣ್ ಕುಮಾರ್ ವ್ಯಾಸ್ ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಹೀಗೆ ಮಾಡುವುದರಿಂದ ಮನೆಗೆ ನಕರಾತ್ಮಕ ಶಕ್ತಿ ಎಂಟ್ರಿ ಆಗುತ್ತದೆ. ಇದನ್ನು ಪ್ರಯತ್ನಿಸುವುದು ಒಳ್ಳೆಯದಲ್ಲ. ಅದೃಷ್ಟದ ಮೇಲೆ ಮತ್ತು ಮಾನಸಿಕ ಸ್ಥಿತಿಯ ಮೇಲೆ ಕೂಡಾ ಇದು ದುಷ್ಪರಿಣಾಮ ಬೀರುತ್ತದೆಯಂತೆ.

