ಉಡುಪಿ: ಇಂಡಿಯಾ ಮಾರ್ಟ್ ಎಂಬ ಆನ್ಲೈನ್ ಆ್ಯಪ್ ಮುಖೇನವಾಗಿ ಅಡುಗೆ ಪದಾರ್ಥಗಳನ್ನು ಆರ್ಡರ್ ಮಾಡಿ ವ್ಯಕ್ತಿಯೋರ್ವ ಸಾವಿರಾರು ರೂಪಾಯಿ ಕಳೆದುಕೊಂಡ ಘಟನೆ ಉಡುಪಿಯ ಕಾಪು ತಾಲ್ಲೂಕಿನ ಬೆಳಪು ಗ್ರಾಮದಲ್ಲಿ ನಡೆದಿದೆ.
ನಾರಾಯಣ್ ಅವರು ತಾವು ಹಾಕಿಕೊಂಡಿದ್ದ ಯೋಜನೆಗೆ ಪೂರಕವಾಗಿ ಆಹಾರ ಪದಾರ್ಥಗಳನ್ನು ಖರೀದಿಸಬೇಕಿತ್ತು. ಹೀಗಿರುವಾಗ ಇವರ ಮಗ ಶಿವದಾಸ್ ರಾವ್ ಗೂಗಲ್ ನಲ್ಲಿ ಹುಡುಕಿದಾಗ ಇಂಡಿಯಾಮಾರ್ಟ್ ಅಪ್ಲಿಕೇಶನ್ ನಲ್ಲಿ ಸೋಜಿತ್ರಾ ಎಂಟರ್ಪ್ರೈಸ್ ಎಂಬ ಸಂಸ್ಥೆಯ ನಂಬರ್ ಸಿಕ್ಕಿದೆ.
ಕಾಲ್ ಮಾಡಿದಾಗ ಶಿವಸೆಂಗಾರ್ ಎಂಬ ವ್ಯಕ್ತಿ ಮಾತನಾಡಿ ವ್ಯವಹಾರದ ರೂಪುರೇಷೆಗಳ ಬಗ್ಗೆ ಚರ್ಚಿಸಿ ವ್ಯವಹಾರ ಕಾನೂನುಬದ್ಧವಾಗಿರುತ್ತದೆ ಎಂದು ಹೇಳಿದ ಮೇಲೆ 120ಕೆಜಿ ಜೀರಿಗೆ, 30 ಕೆಜಿ ಕಡಲೆ ಮತ್ತು 30 ಕೆಜಿ ಉದ್ದಿನ ಬೇಳೆ ಆರ್ಡರ್ ನೀಡಿದ್ದಾರೆ.
ಇದಕ್ಕೆ ಇಪ್ಪತ್ನಾಲ್ಕು ಸಾವಿರ ರೂ ಆಗಿದ್ದು ಆತ ಒತ್ತಾಯಿಸಿದಕ್ಕೆ ಮುಂಗಡವಾಗಿ ಆನ್ಲೈನ್ ನಲ್ಲೇ ಪಾವತಿಸಿದ್ದಾರೆ. ಆದರೆ ಪಾವತಿಸಿದ ಬಳಿಕ ಸಾಮಾಗ್ರಿ ಕಳುಹಿಸದೆ ಆರೋಪಿ ಮುಬೈಲ್ ಸ್ವಿಚ್ ಆಫ್ ಮಾಡಿಟ್ಟಿದ್ದಾನೆ. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

