ಕುಂದಾಪುರ: ಇತ್ತೀಚೆಗೆ ಕುಂದಾಪುರದಲ್ಲಿ ಸುದ್ದಿ ಮಾಡಿದ್ದ ಮಹಿಳೆಯ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಇದೀಗ ಅವರು ಮನೆಗೆ ಹಿಂತಿರುಗಿದ್ದಾರೆ. ವಿಠಲವಾಡಿ ನಿವಾಸಿ ಹೀನಾ ಕೌಸರ್ ಮರಳಿ ಮನೆಗೆ ಬಂದಿದ್ದಾರೆ.
ಕೋಡಿ ಸೇತುವೆ ಬಳಿ ಸ್ಕೂಟರ್ ನಲ್ಲಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದರು. ಇದೀಗ ಪೊಲೀಸರ ಮುಂದೆ ಬಾಯ್ಬಿಟ್ಟ ಅವರು ಅಬಿದಾ ಎಂಬಾಕೆಯ ಟಾರ್ಚರ್ ನಿಂದ ಡಿಪ್ರೆಶನ್ ಗೆ ಒಳಗಾಗಿದ್ದೆ. ಕೋಡಿ ಸೇತುವೆ ಬಳಿ ಮೀನುಗಾರರಿದ್ದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲಾಗದೆ ಉಳ್ಳಾಲ ದರ್ಗ ಸೇರಿಕೊಂಡೆ ಎಂದಿದ್ದಾರೆ.
ಸಾಹಿಲ್ ಎಂಬಾತ ಕಾಣೆಯಾಗಿದ್ದ ಬಗ್ಗೆ ವಿಚಾರಿಸಿದಾಗ ನನಗೂ ಆತನಿಗೂ ಏನೂ ಸಂಬಂಧವಿಲ್ಲ. ಅವನೆಲ್ಲಿದ್ದಾನೆಂದು ನನಗೇನು ಗೊತ್ತು ಎಂದಿದ್ದಾರೆ. ಆಶ್ಚರ್ಯವೆಂಬಂತೆ ಇದೀಗ ಸಾಹಿಲ್ ಕೂಡಾ ಮನೆಗೆ ಬಂದಿದ್ದಾನೆ.

