ಮಣಿಪಾಲ: ಹೊಟೇಲ್ ವೊಂದರಲ್ಲಿ ಅವಿತು ಕೂತಿದ್ದ ಅಪರೂಪವಾಗಿ ಸಿಗುವ ಹಾವನ್ನು ರಕ್ಷಣೆ ಮಾಡಲಾದ ಘಟನೆ ಮಣಿಪಾಲದ ಕೆನರಾ ಮಾಲ್ ಒಂದರಲ್ಲಿ ನಡೆದಿದೆ. ಈ ಸಣ್ಣ ಗಾತ್ರದ ಹಾವು ಕಂಡು ಹೊಟೇಲ್ ಮಾಲಿಕರು, ಗ್ರಾಹಕರು ತಬ್ಬಿಬ್ಬಾಗಿದ್ದರು.
ಸುಮಾರು ಐದು ಗಂಟೆಗಳ ಬಳಿಕ ಹಾವನ್ನು ಉರಗ ರಕ್ಷಕ ಪ್ರಾಣೇಶ್ ಪರ್ಕಳ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಕನ್ನಡದಲ್ಲಿ ಇರ್ತಲೆ, ಇಮ್ಮಂಡೆ ಮತ್ತು ಇರ್ಬಾ ಎಕ್ಕಳೆ ಎಂದು ಕರೆಯಲಾಗುವ ಈ ಹಾವು ವಿಷರಹಿತ ಹಾವಾಗಿದ್ದು ವಿಟೇಕರ್ಸ್ ಬೋವಾ ಎಂದು ಕೂಡಾ ಕರೆಯುತ್ತಾರೆ.


