ಹೆಬ್ರಿ : ಹೆಬ್ರಿ ತಾಲೂಕಿನ ಸಿದ್ಧಾಪುರ-ಹೆಬ್ರಿ ರಾಜ್ಯ ಹೆದ್ದಾರಿ ಕುಚ್ಚೂರು ಕೆಂಚಾರ್ಕಳ ಪ್ರದೇಶದಲ್ಲಿ ಅತಿಯಾದ ಮಳೆಯಿಂದ ಹಾನಿಗೊಂಡ ರಸ್ತೆ ಹಾಗೂ ಮೋರಿಯನ್ನು ರಕ್ಷಣಾ ತಡೆಗೋಡೆಯೊಂದಿಗೆ ಪುನರ್ ನಿರ್ಮಿಸುವ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಜೂ.27 ರಿಂದ ಜುಲೈ 30 ರ ವರೆಗೆ ಸಿದ್ಧಾಪುರ-ಹೆಬ್ರಿ (ಹೆಬ್ರಿ-ಕುಚ್ಚೂರು-ಕಂಚಾರ್ಕಳ- ಮಾಂಡಿ ಮೂರಕೈ) ಮೂಲಕ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಜಿಲ್ಲಾಧಿಕಾರಿ ಸ್ವರೂಪ ಟಿ. ಆದೇಶಿಸಿದ್ದಾರೆ.
ಬದಲಿ ಮಾರ್ಗ: ಕಾಮಗಾರಿ ನಡೆಯುವ ತನಕ ಸಿದ್ಧಾಪುರದಿಂದ ಹೆಬ್ರಿಗೆ ಬರುವವರಿಗೆ ಬದಲಿ ಮಾರ್ಗದ ವ್ಯವಸ್ಥೆಯನ್ನು ಮಾಡಲಾಗಿದ್ದು ಅದರಂತೆ ಸಿದ್ಧಾಪುರದಿಂದ ಹೆಬ್ರಿ ಕಡೆಗೆ ಬರುವವರು ಗ್ರಾಮೀಣ ರಸ್ತೆಯಾದ ಮಾಂಡಿಮೂರುಕೈ-ಮೀನುಗದ್ದೆ-ಬೇಳಂಜೆ-ಕುಚ್ಚೂರು ಮಾರ್ಗ ಬಳಸಿ ಹೆಬ್ರಿಯನ್ನು ತಲುಪಬಹುದುದಾಗಿದೆ. ಅದರಂತೆ ಹೆಬ್ರಿಯಿಂದ ಸಿದ್ದಾಪುರ ಕಡೆಗೆ ತೆರಳುವವರೂ ಇದೇ ಮಾರ್ಗವನ್ನು ಬಳಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


