ಕಾಪು: ಇಲ್ಲಿನ ಮಜೂರು ಶ್ರೀ ವಿಷ್ಣುಮೂರ್ತಿ ದೇಗುಲದ ಸುತ್ತಮುತ್ತಲ ಹಲವು ಮನೆಗಳ ಬಾವಿ ನೀರು ಕಲುಷಿತಗೊಂಡಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ನೀರನ್ನು ಯಾವುದಕ್ಕೂ ಬಳಸಲು ಯೋಗ್ಯವಾಗಿಲ್ಲ ಎಂದು ದೂರಿದ್ದಾರೆ.
ಈ ಬಗ್ಗೆ ಸ್ಥಳೀಯರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದು ಸಿಬ್ಬಂದಿ ಭೇಟಿ ನೀಡಿ ನೀರನ್ನು ಪರೀಕ್ಷೆಗಾಗಿ ಕೊಂಡೊಯ್ದಿದ್ದು ಅದರಲ್ಲಿ ಸೂಕ್ಷ್ಮಾಣು ಜೀವಿಗಳು, ಅಮೋನಿಯಾ ಅಂಶ ಇರುವುದು ದೃಢವಾಗಿದೆ.
ಆದರೆ ದಿಢೀರ್ ಈ ರೀತಿ ನೀರು ಕಲುಷಿತವಾಗಲು ಕಾರಣವೇನು ಎಂಬುವುದು ತಿಳಿದುಬಂದಿಲ್ಲ. ಸದ್ಯಕ್ಕೆ ಜನರು ಪರ್ಯಾಯವಾಗಿ ಗ್ರಾ.ಪಂ ನೀಡುವ ನಳ್ಳಿ ನೀರನ್ನೇ ಬಳಸಿಕೊಳ್ಳುತ್ತಿದ್ದಾರೆ.


