ಶಿರ್ವ: ಮಟ್ಟಾರು ಬಬ್ಬರ್ಯ ದೈವಸ್ಥಾನದ ಬಳಿಯ ನಿವಾಸಿ ಪವಿತ್ರಾ (28) ಅವರ ಮನೆಗೆ ಯಾರೋ ಕಳ್ಳರು ನುಗ್ಗಿ ಸುಮಾರು 8.8ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದು ಪರಾರಿಯಾದ ಘಟನೆ ಜೂ. 27ರ ರಾತ್ರಿ ನಡೆದಿದೆ.
ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪವಿತ್ರಾ ಅವರ ಮನೆಯ ಕಿಟಿಕಿಯ ಮೂಲಕ ಅಡುಗೆ ಕೋಣೆೆಯ ಬಾಗಿಲಿನ ಚಿಲಕ ಮುರಿದು ಒಳನುಗ್ಗಿದ ಕಳ್ಳರು ರೂಮ್ನ ಒಳಗಡೆ ಇದ್ದ ಕಬ್ಬಿಣದ ಕಪಾಟಿನ ಬಾಗಿಲು ತೆರೆದು ಅದರ ಒಳಗಡೆ ಇದ್ದ ಸೊತ್ತುಗಳನ್ನು ಜಾಲಾಡಿದ್ದಾರೆ.
ರೂಮ್ನೊಳಗಡೆ ಇದ್ದ ಮರದ ಕಪಾಟಿನ ಡ್ರಾವರ್ನ ಒಳಗಡೆ ಇಟ್ಟಿದ್ದ ಚಿನ್ನಾಭರಣಗಳಾದ 28 ಗ್ರಾಂ ತೂಕದ ಕರಿಮಣಿ ಸರ, 20 ಗ್ರಾಂ ತೂಕದ 2 ಬಳೆೆ, 16 ಗ್ರಾಂ ತೂಕದ ಪಕಳ ಸರ, 20 ಗ್ರಾಂ ತೂಕದ ಮುತ್ತು ಸರ, 8 ಗ್ರಾಂನ 1 ಜತೆ ಕಿವಿಯ ಓಲೆ, 10 ಗ್ರಾಂನ 1 ಜತೆ ಕಿವಿಯ ಓಲೆ, 3 ಗ್ರಾಂನ 1 ಜತೆ ಚಿಕ್ಕ ಓಲೆ, 20 ಗ್ರಾಂ ತೂಕದ 1 ಸರ, 6 ಗ್ರಾಂನ 3 ಉಂಗುರ, 2 ಗ್ರಾಂನ 1 ಪೆಂಡೆಂಟ್ ಹಾಗೂ 4 ಗ್ರಾಂ ತೂಕದ 1 ಬ್ರಾಸ್ಲೆಟ್ ಸಹಿತ ಒಟ್ಟು 137 ಗ್ರಾಂ ತೂಕದ ರೂ. 8,81,000 ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದಾರೆ.
ಮನೆಯೊಡತಿ ರಾತ್ರಿ ಮನೆಯ ಬಾಗಿಲು ಭದ್ರಪಡಿಸಿ ರೂಮ್ನೊಳಗಡೆ ಮಲಗಿದ್ದು ಜೂ.28ರ ಬೆಳಗ್ಗೆ ಎದ್ದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಶಿರ್ವ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

