ಮಂಗಳೂರು: ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಬಾಲಕಿಯನ್ನು ಬೀಚ್ ಬಳಿ ಕರೆದುಕೊಂಡು ಬಂದ ಯುವಕನೋರ್ವ ಕಾರಿನಲ್ಲೇ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ.
ಅಡ್ಯಾರ್ ವಳಚ್ಚಿಲ್ ನಿವಾಸಿ ಕೆಲ್ವಿನ್ (24) ಬಂಧಿತ ಆರೋಪಿ. ಈತ ಬಾಲಕಿಯನ್ನು ಇನ್ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡಿದ್ದ. ನಂತರ ಆಕೆಯನ್ನು ಲವ್ ಮಾಡುವುದಾಗಿ ನಂಬಿಸಿ ಫೋನ್ ಮಾಡಿ ಆಕೆಯನ್ನು ಮನೆಯ ಬಳಿಯಿಂದಲೇ ಕರೆದೊಯ್ದಿದ್ದ.
ತನ್ನ ಕಾರಲ್ಲಿ ಆಕೆಯನ್ನು ಸೋಮೇಶ್ವರ ಬೀಚ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ವಿರೋಧ ವ್ಯಕ್ತಪಡಿಸಿದರೂ ಈ ಕೃತ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಬಾಲಕಿ ತಿಳಿಸಿದ್ದಾಳೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

