ಕಂಡ್ಲೂರು: ಮೊಗವೀರ ಯುವ ಸಂಘಟನೆ, ಉಡುಪಿ ಜಿಲ್ಲೆ ಕುಂದಾಪುರ ಘಟಕ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ಇವರ ನೇತೃತ್ವದಲ್ಲಿ ಶ್ರೀರಾಮ ಭಜನಾ ಮಂದಿರ ಹಳೇಕೋಟೆ, ಶ್ರೀ ಗಣೇಶೋತ್ಸವ ಸಮಿತಿ ಕಂಡ್ಲೂರು, ಶ್ರೀ ವೀರಮಾರುತಿ ಭಜನಾ ಮಂಡಳಿ ಹಳನಾಡು, ಶ್ರೀ ಶಾರದೋತ್ಸವ ಸಮಿತಿ, ಕನ್ನಿಕಾ ಫ್ರೆಂಡ್ಸ್ ಕಂಡ್ಲೂರು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಶ್ರೀ ಮಹಾಗಣಪತಿ ಭಜನಾ ಮಂಡಳಿ ಹಳನಾಡು ಇವರ ಸಹಯೋಗದೊಂದಿಗೆ ಇಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
ಕಂಡ್ಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಮಧ್ಯಾಹ್ನ ಎರಡು ಗಂಟೆಯವರೆಗೆ ಸ್ವಯಂ ಪ್ರೇರಿತ ರಕ್ತದಾನ ನಡೆಯಲಿದೆ.
ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜೀವ ಉಳಿಸುವ ಈ ಪುಣ್ಯ ಕೆಲಸದಲ್ಲಿ ಭಾಗಿಯಾಗುವಂತೆ ಮೊಗವೀರ ಯುವ ಸಂಘಟನೆ ಮನವಿ ಮಾಡಿದೆ.


