ಬ್ರಹ್ಮಾವರದ ಮಾಬುಕಳ ಸೇತುವೆ ಸಮೀಪದ ಕುಮ್ರಗೋಡು ಸಮೀಪ ಖಾಸಗಿ ಬಸ್ ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದು ಸ್ಕೂಟರ್ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ನಡೆದಿದೆ.
ಗಂಭೀರವಾಗಿ ಗಾಯಗೊಂಡ ಮಹಿಳೆ ಮತ್ತು ಇನ್ನೊಬ್ಬರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಸವಾರರನ್ನು ಅವರ ವಾಹನದಲ್ಲಿದ್ದ ದಾಖಲೆ ಪ್ರಕಾರ ಸಾಸ್ತಾನ ಪಾಂಡೇಶ್ವರ ನಿವಾಸಿ ಬಸವ ತಿಂಗಳಾಯ ಎಂದು ಗುರುತಿಸಲಾಗಿದೆ . ಖಾಸಗಿ ಬಸ್ ಡಿಕ್ಕಿಯಾದ ಹೊಡೆತಕ್ಕೆ ಸ್ಕೂಟರ್ ಸವಾರರು ರಸ್ತೆಗೆ ಬಿದ್ದಿದ್ದಾರೆ.

ಖಾಸಗಿ ಬಸ್ ಗಳ ಮಿತಿಮೀರಿದ ವೇಗದ ಚಾಲನೆಯಿಂದಾಗಿ ಪ್ರತಿದಿನ ಅಪಘಾತಗಳು ಸಂಭವಿಸುತ್ತಿದ್ದು, ಬೇರೆ ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದು ವಾಹನ ಚಲಾಯಿಸಬೇಕಾದ ಪರಿಸ್ಥಿತಿ ತಲೆದೋರಿದೆ. ಈ ಬಗ್ಗೆ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಿ ಖಾಸಗಿ ಬಸ್ ಚಾಲಕರ ಆಟಾಟೋಪಕ್ಕೆ ಬ್ರೇಕ್ ಹಾಕಬೇಕಾದ ಅವಶ್ಯಕತೆ ಇದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಅಲ್ಲದೆ ಈ ಎಲ್ಲಾ ಅವಘಡಗಳಿಗೆ ಸಾರಿಗೆ ಇಲಾಖೆಯೂ ಕಾರಣವಾಗಿದ್ದಿ, ಅರವತ್ತು ನಿಮಿಷದಲ್ಲಿ ಅರವತ್ತು ಕಿಲೋಮೀಟರ್ ಚಲಿಸಲೇಬೇಕು ಎಂಬ ಷರತ್ತು ಮತ್ತು ಪ್ರತಿ ಒಂದು ಎರಡು ನಿಮಿಷಕ್ಕೊಮ್ಮೆ ಬಸ್ ಗಳ ಟೈಮಿಂಗ್ ನಿಗದಿಪಡಿಸಿರುವುದು ಅವೈಜ್ಞಾನಿಕ ಕ್ರಮವಾಗಿದ್ದು, ಈ ಬಗ್ಗೆ ಸಾರಿಗೆ ಇಲಾಖೆ ಮರುಪರಿಶೀಲನೆ ಮಾಡುವ ಅವಶ್ಯಕತೆ ಇದೆ.


