ಬ್ರಹ್ಮಾವರ ತಾಲ್ಲೂಕಿನ ಕುಂಜಾಲು ಮುಖ್ಯ ರಸ್ತೆಯ ರಾಮ ಮಂದಿರದ ಸಮೀಪ ಶನಿವಾರ ರಾತ್ರಿ ದುಷ್ಕರ್ಮಿಗಳು ದನದ ರುಂಡ ಮತ್ತು ಇತರೆ ದೇಹದ ಭಾಗಗಳನ್ನು ಎಸೆದ ಪ್ರಕರಣ ಜಿಲ್ಲೆಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಶಾಸಕ ಯಶಪಾಲ್ ಸುವರ್ಣ ಆರೋಪಿಗಳನ್ನು 24 ಘಂಟೆ ಒಳಗೆ ಬಂಧಿಸುವಂತೆ ಆಗ್ರಹಿಸಿ ನಿನ್ನೆ ಕುಂಜಾಲು ಪೇಟೆಯಲ್ಲಿ ಬ್ರಹತ್ ಪ್ರತಿಭಟನೆ ನಡೆದಿತ್ತು.
ಇದೀಗ ಸಮಾಜದ ಸ್ವಾಸ್ಥ್ಯ ಕೆಡಿಸಲು ಸಂಚು ರೂಪಿಸಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಪೂರ್ಣ ಮಾಹಿತಿ ಸಂಜೆ ವೇಳೆಗೆ ಪೊಲೀಸರೇ ಬಹಿರಂಗಪಡಿಸುವ ಸಾಧ್ಯತೆ ಇದೆ.
ಕೋಮು ಸೌಹಾರ್ದ ಕೆಡಿಸುವ ದುಷ್ಕರ್ಮಿಗಳ ವಿರುದ್ಧದ ಬ್ರಹ್ಮಾವರ ಪೊಲೀಸರ ಮಿಂಚಿನ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.

