ಬಿಗ್ಬಾಸ್ ಕನ್ನಡ ಹನ್ನೆರಡನೇ ಸೀಸನ್ ಗೆ ಸಕಲ ರೀತಿಯ ಸಿದ್ಧತೆಗಳು ನಡೆಯುತ್ತಿದೆ. ಅಗಸ್ಟ್ ಅಥವಾ ಸಪ್ಟೆಂಬರ್ ನಲ್ಲಿ ಬಿಗ್ಬಾಸ್ ಸೀಸನ್ ೧೨ ಶುರುವಾಗುವ ನಿರೀಕ್ಷೆಯಿದೆ. ಈ ಬೆನ್ನಲ್ಲೇ ಬಿಗ್ಬಾಸ್ ಟೀಂ ಕೆಲವು ಸ್ಪರ್ಧಿಗಳನ್ನು ಈಗಾಗಲೇ ಅಪ್ರೋಚ್ ಮಾಡಲಾಗಿದೆ ಎನ್ನಲಾಗುತ್ತಿದೆ.
ನಾಲ್ಕು ಜನರಿಗೆ ಫೋನ್ ಕಾಲ್ ಹೋಗಿದೆ ಎಂಬ ವದಂತಿಗಳು ಕೇಳಿ ಬರುತ್ತಿದೆ. ನಟಿ ಪ್ರಿಯಾಂಕಾ ಉಪೇಂದ್ರ ಅವರಿಗೆ ಬಿಗ್ಬಾಸ್ ಆಫರ್ ಹೋಗಿದೆ ಎನ್ನಲಾಗುತ್ತಿದೆ. ಇನ್ನು ಕೆಜಿಎಫ್ ಸಿನಿಮಾದಲ್ಲಿ ಸದ್ದು ಮಾಡಿದ್ದ ನಟಿ ಅರ್ಚನಾ ಜೋಯಿಸ್ ಅವರಿಗೂ ಬಿಗ್ಬಾಸ್ ಕಡೆಯಿಂದ ಕಾಲ್ ಹೋಗಿದೆ ಎನ್ನಲಾಗುತ್ತಿದೆ.
ಶ್ರೀರಸ್ತು ಶುಭಮಸ್ತು ಧಾರವಾಹಿಯ ನಟ ಶ್ರೀ ಮಹಾದೇವ್ ಅವರಿಗೂ ಅಪ್ರೋಚ್ ಮಾಡಲಾಗಿದೆ ಎನ್ನಲಾಗ್ತಿದೆ. ಕಳೆದ ವರ್ಷಗಳಿಂದಲೂ ಡಾ. ಬ್ರೋ ಬಿಗ್ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ವದಂತಿ ಹಬ್ಬಿದ್ದು ಈ ಬಾರಿ ಇವರು ಬರೋದು ಪಕ್ಕಾನಾ ಎಂಬ ಪ್ರಶ್ನೆ ಮೂಡಿದೆ. ಒಟ್ಟಿನಲ್ಲಿ ಇದು ಅಂತೆಕಂತೆ ಮಾತುಗಳಷ್ಟೆ. ಯಾವುದಕ್ಕೂ ಬಿಗ್ಬಾಸ್ ತಂಡ ಅಧಿಕೃತ ಪಟ್ಟಿ ರಿಲೀಸ್ ಮಾಡಬೇಕಷ್ಟೆ.

