ಮಂಗಳೂರು: ಮಂಗಳೂರಿನ ಖ್ಯಾತ ಐಸ್ ಕ್ರೀಂಗೆ ಮತ್ತೊಮ್ಮೆ ಗ್ಲೋಬಲ್ ಮಟ್ಟದ ಮಾನ್ಯತೆ ಸಿಕ್ಕಿದೆ. ಈ ಮೂಲಕ ವಿಶ್ವದ ಟಾಪ್ ೧೦೦ ಲಿಸ್ಟ್ ನಲ್ಲಿ ಮಂಗಳೂರಿನ ಸ್ಪೆಷಲ್ ಐಸ್ ಕ್ರೀಂ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ವಿಶ್ವದ ಪ್ರತಿಷ್ಠಿತ ಐಸ್ ಕ್ರೀಂಗಳ ಪಟ್ಟಿಯಲ್ಲಿ ಐದು ವಿಶಿಷ್ಟ ಭಾರತೀಯ ಐಸ್ ಕ್ರೀಂಗಳು ಸತತ ಎರಡನೇ ಬಾರಿ ಸ್ಥಾನ ಪಡೆದುಕೊಂಡಿದೆ. ಅದರಲ್ಲೂ ಮಂಗಳೂರಿನ ಗಡ್ ಬಡ್ ಐಸ್ ಕ್ರೀಂ ವಿಶ್ವದ ಟಾಪ್ ಐಸ್ ಕ್ರೀಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪಬ್ಬಾಸ್ ರೆಸ್ಟೋರೆಂಟ್ ನ ಈ ವಿಶೇಷ ಐಸ್ ಕ್ರೀಂ ಕರಾವಳಿಗರ ಇಮೋಷನ್ ಅಂತಾನೇ ಹೇಳಬಹುದು. ಇದು ಮೂವತ್ತ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

