ಮಂಗಳೂರು: ಇನ್ಫೋಸಿಸ್ ಉದ್ಯೋಗಿ, ಅಡ್ಯಾರ್ ಕಣ್ಣೂರು ಗಾಣದಬೆಟ್ಟು ನಿವಾಸಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಕೇರಳದ ವಯನಾಡ್ ನಲ್ಲಿ ನಡೆಸಿದೆ.
ಮುಹಮ್ಮದ್ ಹಾಶೀರ್ (32) ರವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.
ಕೇರಳದ ವಯನಾಡ್ ನಲ್ಲಿ ಇನ್ಫೋಸಿಸ್ ನ ಉದ್ಯೋಗಿಯಾಗಿದ್ದ ಮುಹಮ್ಮದ್ ಹಾಶೀರ್ ಅವರು ಮಂಗಳೂರಿನ ಪ್ರಕಾಶ್ ಬೀಡಿ ಉದ್ಯಮಿ G.B. ಹಸನಬ್ಬ ( G.B. ಬಾವ ) ಹಾಗೂ ಅವರ ಮಗಳ ಹಿರಿಯ ಮಗ. ಮೃತರು ಪತ್ನಿ, ಒಂದು ವರ್ಷದ ಹೆಣ್ಣು ಮಗು ಮತ್ತು ತಂದೆ, ತಾಯಿಯ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

