ಕೋಟ: ವೈದ್ಯರೊಬ್ಬರ ಮನೆಯ ಬಾಗಿಲನ್ನು ಒಡೆದು ಒಳಗೆ ನುಗ್ಗಿದ ಖದೀಮರು ಗೃಹೋಪಯೋಗಿ ವಸ್ತುಗಳನ್ನು ಕಳ್ಳತನಗೈದ ಘಟನೆ ಕೋಟದ ಸಾಸ್ತಾನ ಸಮೀಪ ಪಾಂಡೇಶ್ವರದಲ್ಲಿ ನಡೆದಿದೆ. ಇಲ್ಲಿನ ಆದರ್ಶ ಐಸ್ ಪ್ಲಾಂಟ್ ಬಳಿಯ ನಿವಾಸಿ ಡಾ.ಸುರೇಶ್ ಶೆಟ್ಟಿ ಅವರ ಮನೆಯಲ್ಲಿ ಈ ಕೃತ್ಯ ನಡೆದಿದೆ.
ಎ.ಸಿ, ಫ್ರಿಡ್ಜ್, ಕುಕ್ಕರ್ ಇತ್ಯಾದಿ ಗೃಹ ಬಳಕೆಯ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಮನೆಯ ಮಾಲಕರು ಮನೆಯಲ್ಲಿ ಇಲ್ಲದೆ ಹೊರ ಜಿಲ್ಲೆಯಲ್ಲಿದ್ದ ಕಾರಣ ಅದನ್ನೇ ದುರುಪಯೋಗೊಡಿಸಿಕೊಂಡು ಕಳ್ಳರು ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

