ಶಿರ್ವ: ವ್ಯಕ್ತಿ ಯೊಬ್ವರು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಪುವಿನಲ್ಲಿ ಸಂಭವಿಸಿದೆ.
ಬೆಳಪು ನಿವಾಸಿ ರಂಜನ್ (35) ಅವರು ಜು. 5ರ ರಾತ್ರಿ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಒಬ್ಬಂಟಿಯಾಗಿದ್ದ ಅವರು 5 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು, ಉಡುಪಿಯ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪ್ರತೀದಿನ ನೆರೆಮನೆಯಲ್ಲಿ ರಾತ್ರಿ ಊಟ ಮುಗಿಸಿ ತನ್ನ ಮನೆಗೆ ಬಂದು ಮಲಗುತ್ತಿದ್ದರು.
ಜು. 6ರ ಬೆಳಗ್ಗೆ ತಿಂಡಿಗೆ ಬಾರದಿದ್ದಾಗ ನೆರೆಮನೆಯಾಕೆ ಅವರ ಮನೆಗೆ ಹೋಗಿ ಕಿಟಿಕಿಯ ಮೂಲಕ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮಂಜುಳಾ ಸತೀಶ್ ಶೆಟ್ಟಿ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

