ಬೆಳ್ಮಣ್ಣು: ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ತಮ್ಮ ಕುಟುಂಬದೊಂದಿಗೆ ಕಾರ್ಕಳದ ಐತಿಹಾಸಿಕ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಇವರು ಯಾವುದೇ ಕೆಲಸದ ನಿಮಿತ್ತ ಬಂದಿರದೆ ವೈಯಕ್ತಿಕವಾಗಿ ಕುಟುಂಬ ಸಮೇತ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ವಿಶೇಷ ಚಂಡಿಕಾ ಹೋಮದಲ್ಲಿ ಪಾಲ್ಗೊಂಡಿದ್ದಾರೆ.
ದೇಗುಲದ ಆಡಳಿತ ಮಂಡಳಿ ಮತ್ತು ಅರ್ಚಕರು ಸಚಿವರನ್ನು ಆದರದಿಂದ ಬರಮಾಡಿಕೊಂಡರು. ದೇಗುಲದ ವಿಶೇಷ ಪೂಜೆಗಳ ಬಗ್ಗೆ ಮಾಹಿತಿ ನೀಡಿದರು.

