ಉಡುಪಿ: ಕಳೆದ ಎರಡು ವರ್ಷದಿಂದ ಕೊಠಡಿಯಲ್ಲಿ ಗೃಹಬಂಧನದಲ್ಲಿದ್ದ ಮನೋರೋಗಿ ಮಹಿಳೆಯನ್ನು ಸಖೀ ಸೆಂಟರಿನ ಸಿಬ್ಬಂದಿ ಹಾಗೂ ಪೊಲೀಸರ ನೆರವಿನಿಂದ ರಕ್ಷಿಸಿ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.
ಮೂವತ್ತೆಂಟು ವರ್ಷದ ಗೃಹ ಬಂಧನದಿಂದ ರಕ್ಷಿಸಲ್ಪಟ್ಟವರು. ಇವರು ವಿವಾಹಿತರಾಗಿದ್ದು ಇಬ್ಬರು ಚಿಕ್ಕ ಮಕ್ಕಳೂ ಇದ್ದಾರೆ.
ಕೊಠಡಿಯ ಕಿಟಕಿಯಲ್ಲಿ ಮಹಿಳೆ ನನ್ನನ್ನು ರಕ್ಷಿಸಿ. ಬದುಕಲು ಆಗುತ್ತಿಲ್ಲ. ದೈಹಿಕ, ಮಾನಸಿಕ ಹಿಂಸೆಯಿಂದ ಬಚಾವು ಮಾಡಿ ಎಂದು ಗೋಗರೆದ ಮಹಿಳೆಯನ್ನು ಇದೀಗ ರಕ್ಷಣೆ ಮಾಡಲಾಗಿದೆ. ಸಂಪೂರ್ಣವಾಗಿ ಮುಚ್ಚಲ್ಪಟ್ಟ ಕೊಠಡಿಯ ಸಣ್ಣ ಕಿಟಕಿಯಲ್ಲಿ ಮನೆಯವರು ಅವರಿಗೆ ಆಹಾರ ನೀಡುತ್ತಿದ್ದರು ಎನ್ನಲಾಗಿದೆ.

