ಶಿರ್ವ: ಖಾಲಿ ಜಾಗದಲ್ಲಿ ಬೆಳೆಸಿದ್ದ ಲಕ್ಷಾಂತರ ರೂ ಮೌಲ್ಯದ ಎರಡು ಶ್ರೀಗಂಧದ ಮರಗಳನ್ನು ಕಡಿದು ಕಳ್ಳರು ಕಳವು ಮಾಡಿರುವ ಘಟನೆ ಶಿರ್ವದ ಮೂಡುಬೆಳ್ಳೆಯಲ್ಲಿ ನಡೆದಿದೆ.
ಇಲ್ಲಿನ ಸತೀಶ್ ಎಂಬವರ ತಾಯಿ ಗುಲಾಬಿ ಎಂಬವರ ಹೆಸರಿನ ಜಾಗದಲ್ಲಿ ಸುಮಾರು ನಲ್ವತ್ತು ವರ್ಷಗಳಿಂದ ಈ ಶ್ರೀಗಂಧ ಮರವಿತ್ತು.
ಎರಡು ಲಕ್ಷ ರೂ. ಬೆಲೆ ಬಾಳುವ ಈ ಮರಗಳನ್ನು ಖದೀಮರು ಕಡಿದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಅನೇಕ ದಿನಗಳ ಕಾಲ ಈ ಬಗ್ಗೆ ಏನೂ ಸುಳಿವು ಸಿಗದ ಕಾರಣ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

