ಮಂಗಳೂರು: ವಿಶ್ವದ ಪ್ರತಿಷ್ಠಿತ ಕಾರು ಸಂಸ್ಥೆಯಾದ ರೋಲ್ಸ್ ರಾಯ್ಸ್ನಲ್ಲಿ ತುಳುನಾಡಿನ ಕುವರಿಯೋರ್ವಳು ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಈ ಮೂಲಕ ರೋಲ್ಸ್ ರಾಯ್ಸ್ನಲ್ಲಿ ಕೆಲಸ ಪಡೆದ ಕರ್ನಾಟಕದ ಕಿರಿಯ ವಯಸ್ಸಿನ ಮೊದಲ ಯುವತಿ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ತೀರ್ಥಹಳ್ಳಿ ಮೂಲದ ಮಂಗಳೂರಿನಲ್ಲಿ ನೆಲೆಸಿರುವ ರಿತುಪರ್ಣ ಸಹ್ಯಾದ್ರಿ ಕಾಲೇಜಿನಲ್ಲಿ ರೋಬೋಟಿಕ್ಸ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ. 8 ತಿಂಗಳ ಟಾಸ್ಕ್ ಟೆಸ್ಟ್ನಲ್ಲಿ ರಿತುಪರ್ಣರ ಚಾಕಚಕ್ಯತೆ ಕಂಡು ರೋಲ್ಸ್ ರಾಯ್ ಕಂಪನಿ ನೇರವಾಗಿ ನೇಮಕಾತಿ ಪತ್ರ ನೀಡಿದೆ.
ಇನ್ನು ಕೆಲವೇ ತಿಂಗಳಲ್ಲಿ ರಿತುಪರ್ಣ ಅಮೇರಿಕಾಕ್ಕೆ ತೆರಳಲಿದ್ದಾರೆ. ಮಗಳ ಸಾಧನೆಗೆ ಹೆತ್ತವರು ಸಂತಸ ವ್ಯಕ್ತಪಡಿಸಿದ್ದಾರೆ.

