ಮಂಗಳೂರು: ರಸ್ತೆ ಬದಿಯಲ್ಲಿ ಬಿದ್ದಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಬಳೆಯನ್ನು ಆಟೋ ಚಾಲಕನೋರ್ವ ಅದರ ವಾರಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಘಟನೆ ಮಂಗಳೂರಿನ ಜಪ್ಪು ಮಾರ್ಕೆಟ್ ಬಳಿ ನಡೆದಿದೆ.
ಮುಳಿಹಿತ್ಲುವಿನ ಆಟೋ ಚಾಲಕ ವಾಮನ ನಾಯಕ್ ಅವರಿಗೆ ರಸ್ತೆ ಬದಿಯಲ್ಲಿ ಚಿನ್ನದ ಬಳೆ ಸಿಕ್ಕಿತ್ತು. ಅದರ ನಿಜವಾದ ಮಾಲಕನನ್ನು ಸಾಮಾಜಿಕ ಮಾಧ್ಯಮದ ಮುಖೇನ ಪತ್ತೆ ಹಚ್ಚಿ ಚಂದ್ರಹಾಸ್ ಕೆ. ಅವರಿಗೆ ಯಶಸ್ವಿಯಾಗಿ ಹಸ್ತಾಂತರಿಸಿದರು.
ಇವರ ಸಾಮಾಜಿಕ ಜವಾಬ್ದಾರಿಯುತ ಕಾರ್ಯ ಮತ್ತು ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.


