ಮೇಷ: ಸಂಗಾತಿ ನಿಮಗೆ ಅರ್ಹವಾದದನ್ನು ನೀಡುತ್ತಿಲ್ಲ ಎಂದಾದರೆ ಅದನ್ನು ಕೊನೆಗೊಳಿಸಿ. ಆರೋಗ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿ. ಚೈತನ್ಯಶೀಲರಾಗಿಲ್ಲದಿರಬಹುದು.
ವೃಷಭ: ಸಂಗಾತಿ ಸುಳ್ಳು ಹೇಳುವುದನ್ನು ಅರಿತುಕೊಳ್ಳಬಹುದು. ನಿರುದ್ಯೋಗಿಗಳಿಗೆ ಕರೆ ಬರುವ ಸಾಧ್ಯತೆ. ಮಾನಸಿಕ ಆರೋಗ್ಯದ ಮೇಲೆ ಕಾಳಜಿ ವಹಿಸಿ.
ಮಿಥುನ: ಸಂಬಂಧಕ್ಕೆ ಉತ್ಸಾಹ ಮರಳುತ್ತದೆ. ಕೆಲಸದಲ್ಲಿ ಕಠಿಣ ಪರಿಸ್ಥಿತಿ ಎದುರಾಗಬಹುದು. ಒಳ್ಳೆಯ ನೆನಪುಗಳ ಬಗ್ಗೆ ಯೋಚಿಸುತ್ತೀರಿ.
ಕರ್ಕಾಟಕ: ಆತ್ಮಸ್ಥೈರ್ಯದಿಂದ ಕೆಲಸ ಮುಂದುವರಿಸಬಹುದು. ಆರ್ಥಿಕವಾಗಿ ಸಮತೋಲನ ಕಾಯ್ದುಕೊಳ್ಳುವಿರಿ. ಹೊಸ ಕೆಲಸ ಪ್ರಾರಂಭಿಸಲು ಉತ್ತಮ ಸಮಯ.
ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಶ್ರಮದ ಅವಶ್ಯಕತೆಯಿದೆ. ಹಣಕಾಸಿನಲ್ಲಿ ಜಾಗರೂಕತೆಯಿಂದ ನಡೆಯಬೇಕು. ದುಡಿಮೆಯ ಸಂಬಂಧ ಪ್ರಯಾಣ ಸಾಧ್ಯ.
ಕನ್ಯಾ: ಪ್ರೀತಿಪಾತ್ರರ ಜೊತೆ ಅದ್ಭುತ ದಿನ ಕಳೆಯಲಿದ್ದೀರಿ. ಕಾಲ ಕಾಲಕ್ಕೆ ಧ್ಯಾನ ಮಾಡಲು ಪ್ರಯತ್ನಿಸಿ. ನಿದ್ರೆಯ ವೇಳಾಪಟ್ಟಿ ಸರಿಪಡಿಸಿಕೊಳ್ಳಿ.
ತುಲಾ: ನಿರೀಕ್ಷಿಸಿದಷ್ಟು ಹಣ ಪಡೆಯುವ ಸಾಧ್ಯತೆ. ತಿನ್ನುವ ಆಹಾರದ ಬಗ್ಗೆ ಗಮನವಹಿಸಿ. ಸಕಾರಾತ್ಮಕ ಮನಸ್ಥಿತಿಯನ್ನು ಕಾಯ್ದುಕೊಳ್ಳಿ.
ವೃಶ್ಚಿಕ: ಪ್ರಣಯ ಮನಸ್ಸನ್ನು ಆಳುತ್ತದೆ. ಪರೀಕ್ಷೆಯ ಭಯ ಧೈರ್ಯಗೆಡಿಸುವುದು ಬೇಡ. ಇಂದು ನಿಮ್ಮ ಪ್ರೀತಿಪಾತ್ರರು ಸಂತೋಷ ಪಡುತ್ತಾರೆ.
ಧನಸ್ಸು: ಸಂಗಾತಿಯೊಂದಿಗೆ ಸಣ್ಣಪುಟ್ಟ ಸಂಘರ್ಷ ಉಂಟಾಗಬಹುದು. ಬದಲಾವಣೆಯ ಸಮಯ. ದೈನಂದಿನ ಕೆಲಸದಲ್ಲಿ ಬೇಸರಗೊಳ್ಳುವ ಸಾಧ್ಯತೆ.
ಮಕರ: ಗಂಭೀರ ವಿಷಯಗಳ ಬಗ್ಗೆ ಮಾತನಾಡುತ್ತೀರಿ. ಮೊದಲಿಗಿಂತ ನೀವು ಉತ್ತಮವಾಗಿರುತ್ತೀರಿ. ಒಬ್ಬಂಟಿಯಾಗಿ ವ್ಯಾಯಾಮ ಮಾಡುವುದು ಬೇಸರವೆನಿಸಿದರೆ ಸ್ನೇಹಿತರನ್ನು ಕರೆದುಕೊಂಡು ಹೋಗಿ.
ಕುಂಭ: ಸಂಗಾತಿಯೊಂದಿಗೆ ಕಠಿಣ ಪರಿಸ್ಥಿತಿ ಎದುರಾಗಬಹುದು. ಪರಿಸ್ಥಿತಿ ಕಿರಿಕಿರಿ ಉಂಟುಮಾಡಬಹುದು. ಹಣ ಉಳಿಸಲು ಉಳಿತಾಯ ಖಾತೆ ತೆರೆಯಿರಿ.
ಮೀನ: ಸಂಗಾತಿ ವಿಷಯಕ್ಕೆ ಬಂದಾಗ ಸ್ವಲ್ಪ ಆತಂಕಗೊಳ್ಳುತ್ತೀರಿ. ಸಹಾಯ ಕೇಳಲು ಹಿಂಜರಿಯಬೇಡಿ. ಒಟ್ಟಾರೆಯಾಗಿ ಆರೋಗ್ಯವಾಗಿದ್ದೀರಿ.


