ಮಲ್ಪೆ: ತೆಂಗಿನಕಾಯಿ ಹೆಕ್ಕಲು ಹೋದ ವ್ಯಕ್ತಿ ಕೆಸರು ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ. ಪಡುತೋನ್ಸೆಯ ವ್ಯಕ್ತಿ ನಿತ್ಯಾನಂದ ಮೃತಪಟ್ಟ ದುರ್ದೈವಿ.
ಅವಿವಾಹಿತರಾಗಿದ್ದು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಸಂಜೆ ಕಾಯಿ ಹೆಕ್ಕಲೆಂದು ಹೋದವರು ನಾಪತ್ತೆಯಾಗಿದ್ದರು.
ಮಾರನೇ ದಿನ ನೋಡಿದಾಗ ಕೆಸರು ಮಿಶ್ರಿತ ನೀರಿನಲ್ಲಿ ಕವಚಿ ಬಿದ್ದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

