ಕೋಟ: ಪೂರ್ವ ದ್ವೇಷದ ಹಿನ್ನೆಲೆ ಯುವಕನೋರ್ವ ಮತ್ತೋರ್ವ ಯುವಕನಿಗೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ಕೋಟದ ತೆಕ್ಕಟ್ಟೆಯಲ್ಲಿ ನಡೆದಿದೆ.
ಮಣೂರು ಪಡುಕೆರೆ ನಿವಾಸಿ ಭರತ್ ಹಲ್ಲೆಗೊಳಗಾದ ಯುವಕ. ಮನೋಜ್ ಹಲ್ಲೆ ಮಾಡಿದಾತ. ಭರತ್ ನ ಮನೆಗೆ ಬಂದು ಮನೋಜ್ ಅವಾಚ್ಯ ಶಬ್ದಗಳಿಂದ ನಿಂದಿಸಿ ನಂತರ ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ತಲೆಗೆ ಹಲ್ಲೆ ನಡೆಸಿದ್ದಾನೆ.
ಆ ಕೂಡಲೇ ಭರತ್ ಗೆ ಪ್ರಜ್ಞೆ ತಪ್ಪಿದ್ದು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

