ಕುಂದಾಪುರ ತಾಲ್ಲೂಕಿನ ಗಂಗೊಳ್ಳಿ ಯಲ್ಲಿ ನಿನ್ನೆ ನಡೆದ ಭೀಕರ ದೋಣಿ ದುರಂತದಲ್ಲಿ ಸಮುದ್ರಪಾಲಾಗಿದ್ದ ಮೂವರು ಮೀನುಗಾರರ ಪೈಕಿ ಒಬ್ಬರ ಶವ ಕೋಡಿ ಲೈಟ್ ಹೌಸ್ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ನಾಪತ್ತೆಯಾದ ಮೂವರಲ್ಲಿ ರೋಹಿತ್ ಖಾರ್ವಿ (38) ಮೃತ ದೇಹ ಇಂದು ಮುಂಜಾನೆ ಪತ್ತೆಯಾಗಿದೆ.
ಭಾರೀ ಮಳೆ, ಗಾಳಿಯ ನಡುವೆಯೂ ಸ್ಥಳೀಯ ಮೀನುಗಾರರು ಮತ್ತು ಇಲಾಖೆಯ ಸಿಬ್ಬಂದಿಗಳು ನಿರಂತರ ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದು , ಇಂದು ಮುಂಜಾನೆ ನಾಲ್ಕು ಗಂಟೆಗೆ ಮೃತ ದೇಹ ಪತ್ತೆಯಾಗಿದೆ.
ನಾಪತ್ತೆಯಾಗಿರುವ ಇನ್ನು ಇಬ್ಬರಾದ ಜಗದೀಶ ಮತ್ತು ಸುರೇಶ್ ಖಾರ್ವಿ ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ


