ಹೆಬ್ರಿ: ಮಂಗಳೂರಿನ ಪ್ರಖ್ಯಾತ ಉದ್ಯಮಿ, ಕೊಡುಗೈದಾನಿಯೆಂದೇ ಹೆಗ್ಗಳಿಕೆಗೆ ಪಾತ್ರವಾಗಿರುವ ಮುದ್ರಾಡಿ ಬೆಳಗುಂಡಿಯ ಮಂಜುನಾಥ ಆಚಾರ್ಯ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.
ಅತ್ಯಂತ ಸೌಮ್ಯ ಸ್ವಭಾವದ ಮಂಜುನಾಥ ಆಚಾರ್ಯ ಅಪಾರ ಮಂದಿಯ ಪ್ರೀತಿಗೆ ಪಾತ್ರರಾಗಿದ್ದರು. ಮಕ್ಕಳಿಗೆ ಅತ್ಯುತ್ತಮ ಶಿಕ್ಷಣವನ್ನು ನೀಡಿರುವ ಮಂಜುನಾಥ ಆಚಾರ್ಯರು ಇಬ್ಬರು ಗಂಡು ಮಕ್ಕಳು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇತ್ತೀಚೆಗೆ ಲೋಕಾರ್ಪಣೆಗೊಂಡ ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ತೀರ್ಥಮಂಟಪಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಬಳಿಕವೂ ದೇವಸ್ಥಾನದ ಅಭಿವೃದ್ಧಿಗೆ ಸಹಕಾರವನ್ನು ನೀಡುತ್ತ ಬಂದಿದ್ದಾರೆ. ಇವರ ನಿಧನಕ್ಕೆ ಮನೆಯಲ್ಲಿ ಸೂತಕದ ಛಾಯೆ ಏರ್ಪಟ್ಟಿದೆ.
ನಾಳೆ ಇವರ ಅಂತ್ಯಸಂಸ್ಕಾರವು ಮುದ್ರಾಡಿ ಬೆಳಗುಂಡಿಯ ಅವರ ನಿವಾಸದ ಪರಿಸರದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಮಂಜುನಾಥ ಆಚಾರ್ಯ ಅವರ ನಿಧನಕ್ಕೆ ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ, ವಿಶ್ವಕರ್ಮ ಸಮಾಜದ ನೂರಾರು ಗಣ್ಯರು, ಪ್ರಮುಖರು, ಮುದ್ರಾಡಿ ಗಣ್ಯರು ಪ್ರಮುಖರು ಸಂತಾಪ ಸೂಚಿಸಿದ್ದಾರೆ.

