ಉಡುಪಿಯ ಸಂತೆಕಟ್ಟೆಯಲ್ಲಿ ಪ್ರಪ್ರಥಮ ಬಾರಿಗೆ ಹಲಸು ಮತ್ತು ಹಣ್ಣು ಮೇಳ ಇದೇ ಬರುವ ಜು.26 ಮತ್ತು 27ರಂದು ಕೆಮ್ಮಣ್ಣು ಲಿಟ್ಲ್ ಫ್ಲವರ್ ಹಾಲ್ ನಲ್ಲಿ ಅತ್ಯಂತ ಅದ್ಧೂರಿಯಾಗಿ ನಡೆಯಲಿದೆ.
ರಾಜ್ಯದ ವಿವಿಧ ಮೂಲೆಗಳಿಂದ ರುಚಿಯಾದ ಮಾವು ಮತ್ತು ಹಲಸಿನ ಹಾಗೂ ಇತರ ಉತ್ಪನ್ನಗಳ ಮಾರಾಟ ಕೂಡಾ ಇರಲಿದೆ. ಇದಲ್ಲದೆ ಶುಚಿರುಚಿಯಾದ ಹಣ್ಣಿನ ಖಾದ್ಯಗಳ ನೂರಾರು ಸ್ಟಾಲ್ ಗಳು ಈ ಮೇಳದಲ್ಲಿ ಮುಖ್ಯ ಆಕರ್ಷಣೆಯಾಗಲಿದೆ.
ಖಾದ್ಯಪ್ರಿಯರಿಗೆ ಉಚಿತ ಪ್ರವೇಶವಿದ್ದು ಎರಡು ದಿನವೂ ಈ ಮೇಳದಲ್ಲಿ ಮುಕ್ತವಾಗಿ ಭಾಗವಹಿಸುವ ಅವಕಾಶವಿದೆ. ಹಲಸಿನ ಹಣ್ಣಿನ ಚಿಪ್ಸ್, ಸ್ಪೆಷಲ್ ಹಲಸಿನ ಬೆಣ್ಣೆದೋಸೆಯ ಸ್ವಾದವನ್ನೂ ನೀವು ಸವಿಯಬಹುದು ಮತ್ತು ಖರೀದಿಸಬಹುದು.


