ಬ್ರಹ್ಮಾವರ ತಾಲ್ಲೂಕು ಹೋರಾಟ ಸಮಿತಿಯ ಅಧ್ಯಕ್ಷ ಬಾರಕೂರು ಸತೀಶ್ ಪೂಜಾರಿ(50) ನಿನ್ನೆ ನಿಧನ ಹೊಂದಿದ್ದಾರೆ.
ಸಮಾಜ ಸೇವಕರಾಗಿ, ಬ್ರಹ್ಮಾವರ ತಾಲ್ಲೂಕು ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬಾರ್ಕುರು ಸತೀಶ್ ಪೂಜಾರಿ, ಕಳೆದ ಮೂರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರು ಪತ್ನಿಯನ್ನು ಅಗಲಿದ್ದಾರೆ. ಅತ್ಯಂತ ಚಟುವಟಿಕೆಯ, ಹಸನ್ಮುಖಿ, ಹೋರಾಟಗಾರನ ನಿಧನಕ್ಕೆ ಸಮಾಜದ ಗಣ್ಯರು ಕಂಬನಿ ಮಿಡಿದಿದ್ದಾರೆ.

