ಕುಂದಾಪುರ: ಲಾರಿ ಮತ್ತು ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ನಿನ್ನೆ ಕುಂದಾಪುರ ಗ್ರಾಮದ ಚಪ್ಪರಕ ಎಂಬಲ್ಲಿ ನಡೆದಿದೆ.
ರೋಧಿ ಲಾಲ್ ಮೃತಪಟ್ಟ ಸವಾರನಾಗಿದ್ದಾರೆ. ಕೆರಾಡಿ ಕಡೆಯಿಂದ ಬರುತ್ತಿದ್ದ ಬೈಕ್ ಸವಾರ ಎದುರುಗಡೆಯಿಂದ ಬಂದ ಲಾರಿಗೆ ಗುದ್ದಿದ್ದಾನೆ.
ಗುದ್ದಿದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಬಿದ್ದಿದ್ದು ಆತನ ತಲೆಯ ಮೇಲೆ ಲಾರಿಯ ಚಕ್ರ ಹೋಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


