ಕಿನ್ನಿಗೋಳಿ: ಚಿರತೆಯೊಂದು ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಕಿನ್ನಿಗೋಳಿ ಸಮೀಪ ಮೆನ್ನಬೆಟ್ಟು ಎಂಬಲ್ಲಿ ಇಂದು ಮುಂಜಾನೆ ನಡೆದಿದೆ. ಕಿನ್ನಿಗೋಳಿಯ ರಾಬರ್ಟ್ ಎಂಬವರ ಮನೆಯ ಬಾವಿಗೆ ಬಿದ್ದು ಚಿರತೆ ಸಾವನ್ನಪ್ಪಿದೆ.
ರಾಬರ್ಟ ಅವರು ಪಂಪ್ ಆನ್ ಮಾಡುವಾಗ ನೀರು ಬರಲಿಲ್ಲ. ಬಾವಿ ಇಣುಕಿದಾಗ ಚಿರತೆ ಕಂಡುಬಂದಿದ್ದು ತಕ್ಷಣ ಪಂಪ್ ಬಂದ್ ಮಾಡಿದ್ದಾರೆ. ಸತ್ತ ಚಿರತೆಯನ್ನು ನೈಲಾನ್ ಹಗ್ಗದಿಂದ ಮೇಲಕ್ಕೆ ತರಲು ಯತ್ನಿಸಲಾಗಿದೆ.
ಈ ವೇಳೆ ಹಗ್ಗ ಮತ್ತು ಪೈಪ್ ತುಂಡಾಗಿದೆ. ಪಂಪ್ ಗೆ ಅಳವಡಿಸಿದ್ದ ವಿದ್ಯುತ್ ವಯರ್ ಬಾಯಲ್ಲಿ ಕಚ್ಚಿ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


