ಎಷ್ಟೋ ದಿನಗಳ ಬಳಿಕ ಕನ್ನಡ ಚಿತ್ರರಂಗದಲ್ಲಿ ಒಂದು ಅದ್ಭುತ ಸಿನಿಮಾ ರಿಲೀಸ್ ಆಗಿದ್ದು ಭಾರೀ ಸಂಚಲನವನ್ನು ಮೂಡಿಸುತ್ತಿದೆ. ಕರಾವಳಿಯ ಕಲಾವಿದರು ಒಟ್ಟಾಗಿ ನಿರ್ಮಿಸುವ ಸು ಫ್ರಂ ಸೋ ಸಿನಿಮಾ ಇದೀಗ ಥಿಯೇಟರ್ ನಲ್ಲಿ ಸದ್ದು ಮಾಡುತ್ತಿದೆ. ರಾಜ್ ಬಿ ಶೆಟ್ಟಿ ಅವರ ವಿಭಿನ್ನ ಯೋಚನಾಲಹರಿಗೆ ಈ ಸಿನಿಮಾ ಕೈಗನ್ನಡಿಯಂತಿದೆ. ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದ್ದು ಸಿನಿಮಾ ಕಲಾವಿದರು ಫುಲ್ ಖುಷ್ ಆಗಿದ್ದಾರೆ.
ಇದೀಗ ಈ ಚಿತ್ರದ ಸೀಕ್ವೆಲ್ ಬರುತ್ತಾ ಎಂಬ ನಿರೀಕ್ಷೆಯಲ್ಲಿ ಜನ ಇದ್ದಾರೆ. ಭಾರೀ ಯಶಸ್ಸು ಕಂಡ ಈ ಚಿತ್ರದ ಬಗ್ಗೆ ರಾಜ್ ಬಿ ಶೆಟ್ಟಿಯವರು ಸಂಪ್ರದಾಯಕ್ಕೆ ಕಟ್ಟು ಬೀಳದೆ ಸೀಕ್ವೆಲ್ ಮಾಡಲು ನಿರಾಕರಿಸಿದ್ದಾರೆ.
ಸು ಫ್ರಮ್ ಸೋ’ ಸಿನಿಮಾಗೆ ಸೀಕ್ವೆಲ್ ಮಾಡಬಹುದು ಎನ್ನುವ ಚರ್ಚೆಗಳು ನಡೆದಿದ್ದವು. ಆದರೆ, ಅದು ತಮ್ಮ ನೈತಿಕತೆಗೆ ವಿರುದ್ಧವಾಗಿದೆ ಎಂದು ನಂಬುತ್ತಾರೆ ರಾಜ್. ಜೊತೆಗೆ ಗೆದ್ದ ಕುದುರೆಯ ಬಾಲ ಹಿಡಿದು ಓಡುವವರು ಅವರಲ್ಲ. ಈ ಕಾರಣದಿಂದಲೇ ರಾಜ್ ಅವರು ‘ಸು ಫ್ರಮ್ ಸೋ’ ಚಿತ್ರಕ್ಕೆ ಸೀಕ್ವೆಲ್ ಮಾಡಬಾರದು ಎಂದು ನಿರ್ಧರಿಸಿದ್ದಾರೆ.
ಮುಂದಿನ ಬಾರಿ ನಾವು ಹೊಸ ರೀತಿಯ ಸಿನಿಮಾ ಮಾಡುತ್ತೇವೆ. ಅದನ್ನು ನೋಡಲು ಬರುವಾಗ ಈ ಸಿನಿಮಾದ ಮೇಲಿದ್ದ ನಿರೀಕ್ಷೆ ಬೇಡ. ಅದು ಸಂಪೂರ್ಣವಾಗಿ ಹೊಸ ರೀತಿಯದ್ದೇ ಚಿತ್ರ ಆಗಿರಲಿದೆ. ಸಿನಿಮಾ ಗೆಲ್ಲುತ್ತದೆಯೋ ಅಥವಾ ಬಿಡುತ್ತದೆಯೋ ಎರಡನೇ ವಿಷಯ. ಪ್ರಾಮಾಣಿಕ ಪ್ರಯತ್ನವಂತೂ ಇರುತ್ತದೆ’ ಎನ್ನುತ್ತಾರೆ ರಾಜ್ ಬಿ. ಶೆಟ್ಟಿ.






















