ಧರ್ಮಸ್ಥಳ: ನೂರಾರು ಶವ ಹೂತಿಟ್ಟ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು ನಿರಂತರ ಕಾರ್ಯ ಮುಂದುವರಿಯುತ್ತಲೇ ಇದೆ. ಈಗ ಆರನೇ ಗುರುತಿನ ಉತ್ಖನನದ ವೇಳೆ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದೆ ಎನ್ನುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಮೊನ್ನೆಯಿಂದ ಗುಂಡಿ ಅಗೆಯುವ ಕಾರ್ಯ ನಿರಂತರವಾಗಿ ಸಾಗುತ್ತಿದ್ದರೂ ಐದು ಗುಂಡಿಗಳಲ್ಲಿ ಕಳೇಬರ ಸಿಕ್ಕಿರಲಿಲ್ಲ. ಇದೀಗ ಮಹತ್ವದ ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ದೂರುದಾರನ ಪರ ವಕೀಲರಾದ ಧೀರಜ್ ಹಾಗೂ ವಿಶ್ವಾಸ್ ದೌಡಾಯಿಸಿದ್ದಾರೆ.
ದೂರುದಾರ ಗುರುತಿಸಿದ ಸ್ಥಳಗಳ ಪೈಕಿ ಇದೀಗ 6ನೇ ಪಾಯಿಂಟ್ನಲ್ಲಿ 15 ಕಾರ್ಮಿಕರಿಂದ ಉತ್ಖನನ ನಡೆಯುತ್ತಿದ್ದು, ಕೆಲವು ಮೂಳೆಗಳು ಸಿಕ್ಕಿದೆ ಎಂದು ವರದಿಯಾಗಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಎಫ್ಎಸ್ಎಲ್ ತಂಡ ಮೂಳೆಗಳನ್ನು ಸಂರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದು ತಿಳಿದು ಬಂದಿದೆ.

