ಸರ್ಕಾರಿ ಉದ್ಯೋಗ ಮಾಡಬೇಕು ಅನ್ನೋದು ಅನೇಕ ಜನರ ಕನಸು. ಉಡುಪಿಯ ಕೋಚಿನ್ ಶಿಪ್ಯಾರ್ಡ್ ಲಿಮಿಟೆಡ್ ಭಾರತ ಸರ್ಕಾರದ ಅಧೀನ ಸಂಸ್ಥೆಯಾಗಿದ್ದು, ಮಲ್ಪೆಯಲ್ಲಿರುವ ತನ್ನ ಘಟಕಕ್ಕೆ ಶಾಶ್ವತ ಹುದ್ದೆಗಳಿಗೆ ಅರ್ಹ ನಾಗರಿಕರಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ವ್ಯವಸ್ಥಾಪಕ ಮತ್ತು ಉಪ ವ್ಯವಸ್ಥಾಪಕ ಎಂಬ ಎರಡು ಹುದ್ದೆಗಳು ಖಾಲಿಯಿವೆ. ಅರ್ಜಿ ಸಲ್ಲಿಸಲು ಈಗಾಗಲೇ ಆರಂಭವಾಗಿದ್ದು ಕೊನೆಯ ದಿನಾಂಕ ಅ.೧೪ ಆಗಿರುತ್ತದೆ.
ವ್ಯವಸ್ಥಾಪಕ ಹುದ್ದೆಗೆ ಮೆಕಾನಿಕಲ್, ಎಲೆಕ್ಟ್ರಿಕಲ್, ನಾವಲ್ ಆರ್ಕಿಟೆಕ್ಚರ್ ಅಥವಾ ಮೆರೈನ್ ಇಂಜಿನಿಯರಿಂಗ್ನಲ್ಲಿ ಕನಿಷ್ಟ 60% ಅಂಕಗಳೊಂದಿಗೆ ಪದವಿ ಪಡೆದಿರಬೇಕು. ಮತ್ತು ಉಪ ವ್ಯವಸ್ಥಾಪಕ ಹುದ್ದೆಗೆ ಎಲೆಕ್ಟ್ರಿಕಲ್, ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಅಥವಾ ಎಲೆಕ್ಟ್ರಿಕಲ್ & ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪದವಿ ಪಡೆದಿರಬೇಕು. ಅರ್ಜಿ ಶುಲ್ಕ: ಸಾಮಾನ್ಯ/OBC ಅಭ್ಯರ್ಥಿಗಳಿಗೆ ರೂ.1000, SC/ST ಅಭ್ಯರ್ಥಿಗಳಿಗೆ ಶುಲ್ಕವಿಲ್ಲ.
ಅರ್ಹ ಅಭ್ಯರ್ಥಿಗಳಿಗೆ ಫವರ್ ಪಾಯಿಂಟ್ ಪ್ರೆಸೆಂಟೇಶನ್ (30 ಅಂಕ), ಕೆಲಸದ ಅನುಭವ (40 ಅಂಕ), Group Discussion (10 ಅಂಕ), ಮತ್ತು ವೈಯಕ್ತಿಕ ಸಂದರ್ಶನ (20 ಅಂಕ) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ೬೦ಸಾವಿರದಿಂದ ಒಂದು ಲಕ್ಷ ಐವತ್ತು ಸಾವಿರದವರೆಗೆ ವೇತನ ಸಿಗಲಿದೆ.


