113 ವರ್ಷಗಳನ್ನು ಪೂರೈಸಿದ ಸಮರ್ಪಿತ ಸೇವೆಯ ದ್ಯೋತಕವಾಗಿ ಗ್ರಾಹಕರ ನೆಚ್ಚಿನ ಎಂಸಿಸಿ ಬ್ಯಾಂಕ್ ಇದೀಗ ತನ್ನ 20ನೇ ಶಾಖೆಯನ್ನು ಬೈಂದೂರಿನಲ್ಲಿ ಆರಂಭಿಸಲು ನಿರ್ಧರಿಸಿದೆ. ಈ ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಇದೇ ಬರುವ ಆದಿತ್ಯವಾರ ಅಗಸ್ಟ್ 3ರಂದು ಬೆಳಿಗ್ಗೆ 11.15ಕ್ಕೆ ಸರಿಯಾಗಿ ಬೈಂದೂರಿನ ಮಯೂರ ಪೆಟ್ರೋಲ್ ಬಂಕ್ ಬಳಿಯ ದೀಪಾ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಅಧ್ಯಕ್ಷರಾಗಿ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೋ ಅವರು ಉಪಸ್ಥಿತಿ ಇರಲಿದ್ದಾರೆ. ಕಾರ್ಯಕ್ರಮದಲ್ಲಿ ಬೈಂದೂರಿನ ಹೋಲಿ ಕ್ರಾಸ್ ಚರ್ಚ್ ಧರ್ಮಗುರುಗಳಾದ ವಂದನೀಯ ವಿನ್ಸೆಂಟ್ ಕುವೆಲ್ಹೊ ಆಶೀರ್ವಚನ ನೀಡಲಿದ್ದಾರೆ. ಗೌರವ ಅತಿಥಿಗಳಾಗಿ ಬಾಬು ಶೆಟ್ಟಿ, ವಂದನೀಯ ಫಿಲಿಫ್ ನೆಲಿವಿಲ್ಲ, ರಾಜು ಪೂಜಾರಿ, ಸದಾಶಿವ ಡಿ ಪಡುವರಿ, ಕಾಪ್ಸಿ ನೂರ್ ಮೊಹಮದ್, ನಾಗೇಶ್ ಖಾರ್ವಿ, ಮೋಬಿ ಪಿ.ಸಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಆ.9 ಶನಿವಾರದಂದು ಬೆಳ್ಮಣ್ ಶಾಖೆಯ 9ನೇ ಎಟಿಎಂ ಉದ್ಘಾಟನೆ, ಆ.10ಕ್ಕೆ ಸುರತ್ಕಲ್ ಶಾಖೆಯ 10ಎಟಿಎಂ, ಸೆಪ್ಟೆಂಬರ್ 14ರಂದು ಕಿನ್ನಿಗೋಳಿ ಶಾಖೆಯ 12ನೇ ಎಟಿಎಂ, ಸೆ.27ರಂದು ಉಡುಪಿ ಶಾಖೆಯ 13ನೇ ಎಟಿಎಂ, ಅಕ್ಟೋಬರ್ 5 ಭಾನುವಾರದಂದು ಸಂತೆಕಟ್ಟೆಯ 21ನೇ ಶಾಖೆ ಮತ್ತು 14ನೇ ಎಟಿಎಂ ಲೋಕಾರ್ಪಣೆಗೊಳ್ಳಲಿದೆ.


