ಇತ್ತೀಚೆಗೆ ಪ್ರತಿನಿತ್ಯ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ಹೆಚ್ಚುತ್ತಿರುವುದರಿಂದ ಕಾಲೇಜು ಹಾಸ್ಟೆಲ್ಗಳಲ್ಲಿ ಆತ್ಮಹತ್ಯೆ ತಡೆ ಸಾಧನಗಳನ್ನು ಅಳವಡಿಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮುಂದಾಗಿದೆ. ಇತ್ತೀಚೆಗೆ ಮಂಡ್ಯದ ವೈದ್ಯಕೀಯ ಸಂಸ್ಥೆಯಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು. ಇದರ ಬೆನ್ನಲ್ಲೇ ರಾಜೀವ್ ಗಾಂಧಿ ವಿವಿ ಮಹತ್ವದ ಕ್ರಮಕ್ಕೆ ಮುಂದಾಗಿದೆ.
ಆ್ಯಂಟಿ ಸೂಸೈಡ್ ಡಿವೈಸ್ ಸೀಲಿಂಗ್ ಫ್ಯಾನ್ ಮೇಲಿನ ತೂಕ ಮಿತಿಗಿಂತ ಹೆಚ್ಚಾದರೆ ಸ್ವಯಂಚಾಲಿತ ವ್ಯವಸ್ಥೆ ಅಲರ್ಟ್ ಆಗುತ್ತದೆ. ಕೂಡಲೇ ಫ್ಯಾನ್ ಸೀಲಿಂಗ್ ಹುಕ್ನಿಂದ ಬೇರ್ಪಡುತ್ತದೆ. ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದರೆ ಫ್ಯಾನ್ ತಾನಾಗಿಯೇ ಕಳಚಿ ಬೀಳಲಿದೆ. ಅಲ್ಲದೆ, ಹಾಸ್ಟೆಲ್ ಅಧಿಕಾರಿಗಳನ್ನು ಎಚ್ಚರಿಸಲು ಸೈರನ್ ಕೂಡ ಆ್ಯಂಟಿ ಸೂಯಿಸೈಡ್ ಡಿವೈಸ್ನಲ್ಲಿ ಅಳವಡಿಸಲಾಗಿದೆ. ಇದರಿಂದ ಸಾವುಗಳನ್ನು ತಡೆಯುವುದಷ್ಟೇ ಅಲ್ಲದೆ, ವಿದ್ಯಾರ್ಥಿಯನ್ನು ಪತ್ತೆ ಮಾಡಿ ಅವರಿಗೆ ಮಾನಸಿಕ ಧೈರ್ಯ, ಬೆಂಬಲ ನೀಡುವುದೂ ಸಾಧ್ಯವಾಗಲಿದೆ.
ಮಿಮ್ಸ್ ನಲ್ಲಿ ಆ್ಯಂಟಿ ಸೂಯಿಸೈಡ್ ಡಿವೈಸ್ನ ಅಣಕು ಕಾರ್ಯಾಚರಣೆಯನ್ನೂ ನಡೆಸಿ ಪರಿಶೀಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಡಿವೈಸ್ ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಆದಷ್ಟು ಪ್ರಮಾಣದಲ್ಲಿ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಬಹುದು.


