ಉಡುಪಿ : ಇಲ್ಲಿನ ಅಂಬಲಪಾಡಿ ಗ್ರಾಮದ ಅಭಿನಂದನಾ ಪೆಟ್ರೋಲ್ ಬಂಕ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 66 ನೇ ಸರ್ವಿಸ್ ರಸ್ತೆಯಲ್ಲಿ ನೌಶಾದ್ ಎಂಬಾತ ಮೀನಿನ ಲಾರಿಯನ್ನು ಅತೀ ವೇಗದಿಂದ ಚಲಾಯಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆದ ಘಟನೆ ನಿನ್ನೆ ಬೆಳಿಗ್ಗೆ 9.50 ರ ಸುಮಾರಿಗೆ ಸಂಭವಿಸಿದೆ.
ಅಂಬಲಪಾಡಿ ಯಿಂದ ಕರಾವಳಿ ಕಡೆ ಹೋಗುತ್ತಿದ್ದ ಕಾರನ್ನ ಈತ ಲಾರಿಯಲ್ಲಿ ಓವರ್ ಟೇಕ್ ಮಾಡಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮವಾಗಿ ಲಾರಿಯು ಎಡಬದಿಗೆ ತಿರುಗಿ ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆದಿದೆ. ಕಾರು ಈಗಾಗಲೇ ಸಂಪೂರ್ಣ ಜಖಂಗೊಂಡಿದ್ದು ಕಾರಿನ ಮಾಲೀಕ ಮೊಹಮ್ಮದ್ ಜೈನುದ್ದೀನ್ ಉಡುಪಿ ಸಂಚಾರ ಠಾಣೆಗೆ ದೂರು ನೀಡಿದ್ದಾರೆ.


