



ನಾಡಿನೆಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ಭಕ್ತರು ಗಣಪತಿ ಭಕ್ತಿಯಲ್ಲಿ ತಲ್ಲೀನರಾಗಿದ್ದಾರೆ. ಎಲ್ಲ ಶುಭ ಕಾರ್ಯಕ್ಕೆ ಮುನ್ನ ಮೋದಕ ಪ್ರಿಯ ಗಣೇಶನನ್ನು ಪೂಜೆ ಮಾಡ್ತೇವೆ. ವಿಘ್ನ ವಿನಾಯಕ ಎಂದೇ ಪ್ರಸಿದ್ಧಿ ಪಡೆದಿರುವ ಗಣಪತಿ, ಭಕ್ತಿಯಿಂದ ಪೂಜೆ ಮಾಡಿದ ಭಕ್ತರನ್ನು ಎಂದಿಗೂ ಕೈ ಬಿಡೋದಿಲ್ಲ. ಸಂಕಟಹರ ಗಣೇಶನನ್ನು ಪೂಜೆ ಮಾಡಿದ್ರೆ ಜೀವನದ ಎಲ್ಲ ಅಡೆತಡೆ ದೂರವಾಗಿ, ಜೀವನದಲ್ಲಿ ಸುಖ – ಸಂತೋಷ ಪ್ರಾಪ್ತಿಯಾಗುತ್ತೆ. ಗಣಪತಿ ಬಪ್ಪನನ್ನು ಪೂಜಿಸುವುದು ಮತ್ತು ಉಪವಾಸವನ್ನು ಆಚರಿಸುವುದು ಜ್ಞಾನ ಮತ್ತು ಸಮೃದ್ಧಿ ಪಡೆಯಲು ಕಾರಣವಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಗಣೇಶ ಚತುರ್ಥಿಯಂದು ಗಣಪತಿ ಭೂಲೋಕಕ್ಕೆ ಬಂದು ಭಕ್ತರ ಕಷ್ಟ – ನೋವುಗಳನ್ನು ಪರಿಹರಿಸ್ತಾನೆ. ಗಣೇಶ ಚತುರ್ಥಿಯಿಂದ ಹತ್ತು ದಿನಗಳಲ್ಲಿ ಒಂದು ದಿನ ಗಣಪತಿ ನಿಮ್ಮ ಕನಸಿನಲ್ಲಿ ಬಂದ್ರೆ ಅದನ್ನು ಶುಭವೆಂದು ನಂಬಲಾಗುತ್ತದೆ.




ಗಣೇಶ ಚತುರ್ಥಿಯ ವಿಶೇಷತೆ
ಗಣೇಶನನ್ನು ಜ್ಞಾನದ ದೇವರು ಮತ್ತು ಎಲ್ಲಾ ವಿಘ್ನಗಳನ್ನು ನಿವಾರಿಸುವ ವಿಘ್ನನಿವಾರಕ ಎಂದು ಪೂಜಿಸಲಾಗುತ್ತದೆ. ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸುವುದು ಹಿಂದೂ ಸಂಪ್ರದಾಯವಾಗಿದೆ. ಈ ಹಬ್ಬದಲ್ಲಿ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಹೆಚ್ಚು ಸೂಕ್ತ. ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳು ನೀರನ್ನು ಕಲುಷಿತಗೊಳಿಸುವುದರಿಂದ ಮಣ್ಣಿನ ಮೂರ್ತಿ ಬಳಸುವುದು ಪರಿಸರ ಸ್ನೇಹಿಯಾಗಿದೆ. ಈ ಹಬ್ಬವು ಕುಟುಂಬ ಮತ್ತು ಸಮುದಾಯದ ಸದಸ್ಯರನ್ನು ಒಟ್ಟುಗೂಡಿಸುತ್ತದೆ. ಪೂಜೆ, ಆರತಿ, ಪ್ರಸಾದ ವಿತರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನೂ ಒಂದೇ ಸೂರಿನಡಿ ತರುತ್ತವೆ. ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡಬಾರದು ಎಂಬ ನಂಬಿಕೆ ಇದೆ. ಏಕೆಂದರೆ ಆ ದಿನ ಚಂದ್ರನನ್ನು ನೋಡಿದರೆ ಅಪವಾದ ಅಥವಾ ಕಳಂಕ ಬರುತ್ತದೆ ಎಂದು ಹೇಳಲಾಗುತ್ತದೆ.
ಹಿಂದೂ ಧರ್ಮದಲ್ಲಿ ಜನರು ಅತಿ ಹೆಚ್ಚು ಪೂಜಿಸಲಾಗುವ ದೇವರು ಮತ್ತು ದೇವತೆಗಳಲ್ಲಿ ಗಣೇಶನೂ ಒಬ್ಬನಾಗಿದ್ದಾನೆ. ಗಣೇಶನನ್ನು ಪ್ರತಿನಿತ್ಯವೂ ಪೂಜಿಸಲಾಗುತ್ತದೆಯಾದರೂ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗಣೇಶನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಯಾಕೆಂದರೆ, ಈ ದಿನವು ಗಣೇಶ ಚತುರ್ಥಿ ಹಬ್ಬದ ದಿನವಾಗಿದೆ. ಈ ದಿನದಂದು ಗಣೇಶನು ಜನಿಸಿದನು ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುವುದರಿಂದ ನಾವು ಸಂತೋಷವನ್ನು ಪಡೆದುಕೊಳ್ಳಬಹುದಾಗಿದೆ. ಈ ಶುಭ ದಿನದಂದು ಜನರು ತಮ್ಮ ಮನೆಗಳಲ್ಲಿ, ಕಛೇರಿಗಳಲ್ಲಿ, ದೇವಸ್ಥಾನಗಳಲ್ಲಿ ಹಾಗೂ ಪೆಂಡಲ್ಗಳಲ್ಲಿ ಗಣೇಶನ ವಿಗ್ರಹವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ. ಗಣೇಶ ಚತುರ್ಥಿಯ ದಿನದಂದು 10 ದಿನಗಳ ಕಾಲ ಗಣೇಶನ ವಿಗ್ರಹವನ್ನು ಇಟ್ಟು ಪೂಜೆಯನ್ನು ಮಾಡಿ ಅನಂತ ಚತುರ್ದಶಿ ದಿನದಂದು ಗೌರವ ಪೂರ್ವಕವಾಗಿ ವಿಸರ್ಜನೆಯನ್ನು ಮಾಡಲಾಗುತ್ತದೆ. 2025ರ ಗಣೇಶ ಚತುರ್ಥಿಗೆ ಸಂಬಂಧಿಸಿದ ಪ್ರಮುಖ ವಿಚಾರಗಳು ಈ ಲೇಖನದಲ್ಲಿದೆ.




ಹಿಂದೂ ಧರ್ಮದಲ್ಲಿ ಜನರು ಅತಿ ಹೆಚ್ಚು ಪೂಜಿಸಲಾಗುವ ದೇವರು ಮತ್ತು ದೇವತೆಗಳಲ್ಲಿ ಗಣೇಶನೂ ಒಬ್ಬನಾಗಿದ್ದಾನೆ. ಗಣೇಶನನ್ನು ಪ್ರತಿನಿತ್ಯವೂ ಪೂಜಿಸಲಾಗುತ್ತದೆಯಾದರೂ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗಣೇಶನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಯಾಕೆಂದರೆ, ಈ ದಿನವು ಗಣೇಶ ಚತುರ್ಥಿ ಹಬ್ಬದ ದಿನವಾಗಿದೆ. ಈ ದಿನದಂದು ಗಣೇಶನು ಜನಿಸಿದನು ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುವುದರಿಂದ ನಾವು ಸಂತೋಷವನ್ನು ಪಡೆದುಕೊಳ್ಳಬಹುದಾಗಿದೆ. ಈ ಶುಭ ದಿನದಂದು ಜನರು ತಮ್ಮ ಮನೆಗಳಲ್ಲಿ, ಕಛೇರಿಗಳಲ್ಲಿ, ದೇವಸ್ಥಾನಗಳಲ್ಲಿ ಹಾಗೂ ಪೆಂಡಲ್ಗಳಲ್ಲಿ ಗಣೇಶನ ವಿಗ್ರಹವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ. ಗಣೇಶ ಚತುರ್ಥಿಯ ದಿನದಂದು 10 ದಿನಗಳ ಕಾಲ ಗಣೇಶನ ವಿಗ್ರಹವನ್ನು ಇಟ್ಟು ಪೂಜೆಯನ್ನು ಮಾಡಿ ಅನಂತ ಚತುರ್ದಶಿ ದಿನದಂದು ಗೌರವ ಪೂರ್ವಕವಾಗಿ ವಿಸರ್ಜನೆಯನ್ನು ಮಾಡಲಾಗುತ್ತದೆ. 2025ರ ಗಣೇಶ ಚತುರ್ಥಿಗೆ ಸಂಬಂಧಿಸಿದ ಪ್ರಮುಖ ವಿಚಾರಗಳು ಈ ಲೇಖನದಲ್ಲಿದೆ.
ಗಣೇಶ ಚತುರ್ಥಿ ಹಬ್ಬದ ಮಹತ್ವ
ಹಿಂದೂಗಳಾದ ನಾವು ಆಚರಿಸುವ ಅತ್ಯಂತ ಸಂಭ್ರಮ ಮತ್ತು ಸಡಗರದ ಹಬ್ಬಗಳಲ್ಲಿ ಗಣೇಶ ಚತುರ್ಥಿ ಹಬ್ಬ ಕೂಡ ಒಂದಾಗಿದೆ. ಗಣೇಶ ಚತುರ್ಥಿಯನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಆಚರಿಸಲಾಗುತ್ತದೆ. ಗಣೇಶ ಚತುರ್ಥಿ ಹಬ್ಬವನ್ನು ಸುಮಾರು 10 ದಿನಗಳ ಕಾಲ ಆಚರಿಸುವಂತಹ ಒಂದು ಪ್ರಮುಖವಾದ ಹಬ್ಬವಾಗಿದೆ. ಈ 10 ದಿನಗಳವರೆಗೆ ಗಣೇಶನನ್ನು ಪೂಜಿಸುವ ಸಂಪ್ರದಾಯವಿದೆ. ಗಣೇಶನನ್ನು ಶಕ್ತಿ ಮತ್ತು ಜ್ಞಾನದ ದೇವರು ಎಂದು ಪರಿಗಣಿಸಲಾಗುತ್ತದೆ. ಗಣೇಶನು ಎಷ್ಟು ಶಕ್ತಿಶಾಲಿ ದೇವರು ಎಂಬುದಕ್ಕೆ ಗಜಾನನ, ಧೂಮ್ರಕೇತು, ಏಕದಂತ, ವಕ್ರತುಂಡ, ಸಿದ್ದಿ ವಿನಾಯಕ ಮತ್ತು ಆತನ ಇನ್ನಿತರ ಅವತಾರಗಳಿಗೆ ಸಂಬಂಧಿಸಿದ ಕಥೆಯೇ ಸಾಕ್ಷಿಯಾಗಿದೆ. ಎಲ್ಲಾ ಹಿಂದೂ ದೇವರುಗಳಲ್ಲಿ ಗಣೇಶನನ್ನು ಮೊದಲ ಪೂಜಿಪನೆಂದು ಆರಾಧಿಸುವುದರಿಂದಲೇ ನಾವು ಆತನ ಪೂಜೆಯ ಮಹತ್ವವನ್ನು ತಿಳಿದುಕೊಳ್ಳಬಹುದಾಗಿದೆ. ಈ ಕಾರಣಕ್ಕಾಗಿ ನಾವು ಯಾವುದೇ ಶುಭ ಕೆಲಸವನ್ನು ಪ್ರಾರಂಭಿಸುವ ಮುನ್ನ ಗಣೇಶನನ್ನು ಪೂಜಿಸುತ್ತೇವೆ. ಇದು ಆ ಕೆಲಸದಲ್ಲಿ ನಾವು ಅದೃಷ್ಟವನ್ನು ಮತ್ತು ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ. ಇದು ನಮ್ಮಲ್ಲಿ ಧನಾತ್ಮಕ ಕಂಪನಗಳನ್ನು ಕೂಡ ಹೆಚ್ಚಾಗಿಸುತ್ತದೆ ಎನ್ನುವ ನಂಬಿಕೆಯಿದೆ.






ಈ ವರ್ಷ ಗಣೇಶ ಚತುರ್ಥಿ ಆಗಸ್ಟ್
27ರಂದು ಬುಧವಾರ ಬಂದಿದೆ.
- ಚತುರ್ಥಿ ತಿಥಿ ಆರಂಭ: 2025ರ ಆಗಸ್ಟ್ 26ರಂದು ಮಂಗಳವಾರ ಮಧ್ಯಾಹ್ನ 1:54ರಿಂದ
- ಚತುರ್ಥಿ ತಿಥಿ ಮುಕ್ತಾಯ: 2025ರ ಆಗಸ್ಟ್ 27ರಂದು ಬುಧವಾರ ಮಧ್ಯಾಹ್ನ 3:44 ರವರೆಗೆ
- ಗಣಪತಿ ಪೂಜೆಗೆ ಶುಭ ಮುಹೂರ್ತ: 2025ರ ಆಗಸ್ಟ್ 27ರಂದು ಬುಧವಾರ ಬೆಳಗ್ಗೆ 11:05 – 1:40
- ಚಂದ್ರ ದರ್ಶನ ಅಶುಭ ಸಮಯ: 2025ರ ಆಗಸ್ಟ್ 27ರಂದು ಬುಧವಾರ ಬೆಳಗ್ಗೆ 9:28 – ರಾತ್ರಿ 8:57ರವರೆಗೆ
- ಗಣೇಶ ಚತುರ್ಥಿ ದಿನದಂದು ಗಣಪತಿ ಪೂಜೆಯನ್ನು ರಾಹುಕಾಲದ ಸಮಯದಲ್ಲಿ ಮಾಡಬಾರದು. ಈ ದಿನ ರಾಹುಕಾಲವು ಆಗಸ್ಟ್ 27ರಂದು ಬುಧವಾರ ಮಧ್ಯಾಹ್ನ 12:22 ರಿಂದ ಮಧ್ಯಾಹ್ನ 1:59ರವರೆಗೆ ಇರುತ್ತದೆ. ಬಳಿಕ ಶುಕ್ಲ ಯೋಗವು ಮಧ್ಯಾಹ್ನ 12:35ರಿಂದ 1:18ರವರೆಗೆ ಇರುತ್ತದೆ. ಈ ಶುಕ್ಲ ಯೋಗದಲ್ಲಿ ಪೂಜೆ ಮಾಡುವುದು ಮಂಗಳಕರವಾಗಿರುತ್ತದೆ.
ಗಣೇಶ ಚತುರ್ಥಿ ಪೂಜೆ ವಿಧಾನಗಳು
ಗಣೇಶ ಚತುರ್ಥಿಯನ್ನು ಮುಖ್ಯವಾಗಿ ಶುದ್ಧೀಕರಣದೊಂದಿಗೆ ಪ್ರಾರಂಭಿಸಲಾಗುತ್ತದೆ. ಗಣೇಶ ಚತುರ್ಥಿ ಹಬ್ಬದ ದಿನದಂದು ಮುಂಜಾನೆ ಎದ್ದು ಸ್ನಾನ ಮಾಡಿ ಶುದ್ಧರಾಗಬೇಕು. ಇದರ ಬಳಿಕ ಪೂಜೆ ಮಾಡುವ ಸ್ಥಳವನ್ನು ಕೂಡ ಶುದ್ಧಗೊಳಿಸಬೇಕು. ಪೂಜೆ ಮಾಡುವ ಸ್ಥಳದಲ್ಲಿ ಒಂದು ರಂಗೋಲಿಯನ್ನು ಹಾಕಿ ಅದರ ಮೇಲೆ ಒಂದು ಮರದ ಪೀಠವನ್ನು ಇಟ್ಟು, ಅದರ ಮೇಲೆ ಕೆಂಪು ಬಣ್ಣದ ಬಟ್ಟೆಯನ್ನು ಹರಡಿ. ಬಳಿಕ ಹೂವು, ಮಾವಿನ ಎಲೆ ಹಾಗೂ ಬಾಳೆ ಗಿಡಗಳಿಂದ ಮಂಟಪವನ್ನು ಸಿದ್ಧಗೊಳಿಸಬೇಕು. ಅದರ ಮೇಲೆ ಜೇಡಿಮಣ್ಣಿನಿಂದ ತಯಾರಿಸಿದ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಬೇಕು. ಈ ಸಮಯದಲ್ಲಿ ಗಣೇಶನ ವಿಗ್ರಹದ ಮುಖವು ಪೂರ್ವ ಅಥವಾ ಉತ್ತರ ದಿಕ್ಕಿನತ್ತ ಇರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪೂಜೆ ಪ್ರಾರಂಭಿಸುವ ಮೊದಲು ಶುದ್ಧ ಮನಸ್ಸಿನಿಂದ ಪೂಜೆಯ ಸಂಕಲ್ಪ ಮಾಡಿಕೊಳ್ಳಿ. ಪೂಜೆಯು ಗಣಪತಿಯ ಆವಾಹನೆಯೊಂದಿಗೆ ಪ್ರಾರಂಭವಾಗುವುದು. ಗಣಪತಿಯನ್ನು ಆವಾಹನೆ ಮಾಡುವಂತಹ ಸಂದರ್ಭದಲ್ಲಿ ಗಣಪತಿ ಮಂತ್ರಗಳನ್ನು, ಗಣಪತಿ ಅಥರ್ವಶೀರ್ಷವನ್ನು ಪಠಿಸಲಾಗುತ್ತದೆ. ಗಣೇಶನ ಮೂರ್ತಿಗೆ ನೀರು, ಪಂಚಾಮೃತ (ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ ಮಿಶ್ರಣ) ಮತ್ತು ಗಂಧದ ನೀರಿನಿಂದ ಅಭಿಷೇಕ ಮಾಡಿ. ಹೊಸ ಬಟ್ಟೆ, ದಾರ ಮತ್ತು ಹೂವುಗಳಿಂದ ಮೂರ್ತಿಯನ್ನು ಅಲಂಕರಿಸಿ. ಗರಿಕೆ ಹುಲ್ಲು, ಕೆಂಪು ದಾಸವಾಳ ಹೂವುಗಳು ಗಣೇಶನಿಗೆ ಅತ್ಯಂತ ಪ್ರಿಯವಾದವು. ಗಣೇಶನಿಗೆ ಇಷ್ಟವಾದ ಮೋದಕ, ಲಾಡು, ಸುಂಡಲು ಮತ್ತು ಇನ್ನಿತರ ಸಿಹಿ ತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಿ.
ಧೂಪ-ದೀಪ ಬೆಳಗಿ, ಗಣೇಶನಿಗೆ ಆರತಿ ಮಾಡಿ. ‘ಓಂ ಗಂ ಗಣಪತಯೇ ನಮಃ’ ಎಂಬ ಮಂತ್ರವನ್ನು ಪಠಿಸಿ. ಗಣಪತಿಯನ್ನು ವಿಸರ್ಜನೆ ಮಾಡುವವರೆಗೆ ಪ್ರತಿದಿನವೂ ಗಣೇಶನ ವಿಗ್ರಹಕ್ಕೆ ಆರತಿಯನ್ನು, ಪ್ರಾರ್ಥನೆಯನ್ನು ಮತ್ತು ನೈವೇದ್ಯವನ್ನು ಅರ್ಪಿಸಿಕೊಂಡು ಬರಲಾಗುತ್ತದೆ.


