ಮಂಗಳೂರು: ಗೋಧಿ ಸಾಗಿಸುತ್ತಿದ್ದ ಲಾರಿಯೊಂದು ಸುರತ್ಕಲ್ ಸಮೀಪ ಹೆದ್ದಾರಿಯಲ್ಲಿ ಪಲ್ಟಿಯಾda ಘಟನೆ ಸೆಪ್ಟೆಂಬರ್ 2 ರಂದು ನಡೆದಿದ್ದು ಅದರಲ್ಲಿದ್ದ ಲಕ್ಷಾಂತರ ಮೌಲ್ಯದ ಗೋಧಿ ರಸ್ತೆಗೆ ಚೆಲ್ಲಿದೆ.
ಲಾರಿಯ ಮುಂದಿನಿಂದ ಸಾಗುತ್ತಿದ್ದ ಕಾರೊಂದು ಸೂರಜ್ ಹೋಟೆಲ್ ಬಳಿ ತಿರುವು ಪಡೆಯಲು ನಿಧಾನಗೊಳಿಸಿದಾಗ ಈ ಅಪಘಾತ ಸಂಭವಿಸಿದೆ. ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದ ಲಾರಿ ಚಾಲಕ, ವಾಹನವನ್ನು ಬದಿಗೆ ತಿರುಗಿಸಿದ್ದಾನೆ. ಈ ವೇಳೆ ಲಾರಿಯು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.
ಲಾರಿಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಗೋಧಿ ರಸ್ತೆಗೆ ಚೆಲ್ಲಿ ಅಪಾರ ನಷ್ಟವುಂಟಾಗಿದೆ. ಜೆಸಿಬಿ ಬಳಸಿ ಲಾರಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

