ಉಡುಪಿ : ಆತ್ಮಹತ್ಯೆ ಯತ್ನದಲ್ಲಿದ್ದಾಗ ರಕ್ಷಿಸಲ್ಪಟ್ಟಿದ್ದ, ಅಪರಿಚಿತ ಯುವಕನ ವಾರಸುದಾರರು ಪತ್ತೆಯಾಗಿದ್ದು, ಯುವಕನನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.
ನಾಪತ್ತೆಯಾದ ಯುವಕನ ಹುಡುಕಾಟದಲ್ಲಿದ್ದ ಸಂಬಂಧಿಕರ ಮೊಗದಲ್ಲಿ ಸಂತಸ ವ್ಯಕ್ತವಾಯಿತು. ಆಶ್ರಮ ಸಂಚಾಲಕಿ ತನುಲಾ ತರುಣ್, ಹಾಗೂ ಆಶ್ರಮದ ಮೇಲ್ವಿಚಾರಕ ಗೌರೀಶ್ ಯುವಕನ ವಿಳಾಸ ಪತ್ತೆಗೊಳಿಸುವಲ್ಲಿ ಯಶಸ್ವಿಯಾಗಿದರು.
ಕೆಲವು ದಿನಗಳ ಹಿಂದೆ, ಇಂದ್ರಾಳಿಯ ರೈಲು ನಿಲ್ದಾಣದ ಸನಿಹ, ಯುವಕನೊಬ್ಬ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಗ, ಚಾಲಕನ ಸಮಯಪ್ರಜ್ಞೆಯಿಂದ ಯುವಕ ಬದುಕುಳಿದಿದ್ದ. ರೈಲು ಚಲಿಸುತ್ತಿರುವಾಗ ದೂರದಿಂದಲೇ ಗಮನಿಸಿದ ಚಾಲಕ, ರೈಲು ನಿಲ್ಲಿಸಿ, ನಿಲ್ದಾಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ರೈಲ್ವೆ ರೈಲ್ವೆ ಪೋಲಿಸರು ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಸಮಾಜಸೇವಕ ನಿತ್ಯಾನಂದ ಒಳಕಾಡುವರು ಹೊಸಬೆಳಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಿದ್ದರು.
ರಕ್ಷಿಸಲ್ಪಟ್ಟ ಯುವಕ ಉತ್ತರ ಪ್ರದೇಶದ ಸುರೇಂದ್ರ ಕುಮಾರ್ (33ವ) ತಂದೆ ದವ್ಲತ್ ರಾಮ್, ಕಾರ್ಕಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿತ್ತು. ಸಂಸಾರಿಕ ಸಮಸ್ಯೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಲು ಯತ್ನಿಸಿರುವುದಾಗಿ ಯುವಕ ಹೇಳಿಕೊಂಡಿದ್ದನು.

