ಕಾರ್ಕಳ : ಮಹಿಳೆಯ ಚಿನ್ನಾಭರಣಗಳನ್ನು ಅಡವಿರಿಸಿ ವಾಪಾಸು ಬಿಡಿಸಿಕೊಡದೆ ಮೋಸ ಮಾಡಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರ್ಗಾನ ಗ್ರಾಮದ ಸಯ್ಯದ್ ಯುನೀಸ್ ಮತ್ತು ಸಯ್ಯದ್ ಸುಹೇಲ್ ಇವರು ವಂಚನೆ ಎಸಗಿದ ಆರೋಪಿಗಳು.
ಆರೋಪಿಗಳು ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ರುಭೀನಾ ಭಾನು ಅವರನ್ನು ನಂಬಿಸಿ 2020ರಲ್ಲಿ 17,86,200 ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಪಡೆದು ಅದನ್ನು ರಾಜಪುರ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಕುಕ್ಕುಂದೂರು ಶಾಖೆ ಹಾಗೂ ಸುಬ್ರಹ್ಮಣ್ಯ ಸೇವಾ ಸಹಕಾರಿ ಸಂಘ ಕಾರ್ಕಳ ಶಾಖೆಯಲ್ಲಿ ಅಡವು ಇರಿಸಿ ನಂತರ ಬಿಡಿಸಿಕೊಡುವುದಾಗಿ ಹೇಳಿದ್ದಾರೆ.
ಆದರೆ, ಆರೋಪಿತರು ಅಡವಿಟ್ಟ ಚಿನ್ನವನ್ನು ವಾಪಾಸು ಬಿಡಿಸಿಕೊಡದೆ ಮೋಸ ಮಾಡಿರುವುದಾಗಿ ರುಭಿನಾ ಭಾನು ನೀಡಿದ ನ್ಯಾಯಾಲಯದ ಖಾಸಗಿ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
